32ನೇ ಟೋಕಿಯೋ ಒಲಂಪಿಕ್ಸ್: ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು Selfie Point ಅಳವಡಿಕೆ
1 min readಬೆಂಗಳೂರು: ಜಪಾನ್ ದೇಶದಲ್ಲಿ ಟೋಕಿಯೋ ಒಲಂಪಿಕ್ಸ್ 2020 ಕ್ರೀಡಾಕೂಟವು 2021ರ ಜುಲೈ 23 ರಿಂದ ಆಗಸ್ಟ್ 08ರ ವರೆಗೆ ನಡೆಯಲಿದೆ. ಈ ಕ್ರೀಡಾಕೂಟದಲ್ಲಿ ಭಾರತ ದೇಶದಿಂದ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿದ್ದಾರೆ.
ಈ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ಮತ್ತು ಭಾರತದ 130 ಕೋಟಿ ನಾಗರೀಕರು ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಲು ಭಾರತ ಸರ್ಕಾರವು ಎಲ್ಲೆಡೆ Selfie Point ಗಳನ್ನು ಅಳವಡಿಸಲು ಸೂಚಿಸಿರುತ್ತದೆ. ಎಲ್ಲರೂ Selfie Point ಗಳಲ್ಲಿ ಛಾಯಾಚಿತ್ರಗಳನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಪ್ರಚುರ ಪಡಿಸುವ ಮೂಲಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಕೋರಿದೆ.