ಎಸ್.ಎಂ.ಕೃಷ್ಣಗೆ ನಾಡಹಬ್ಬ ದಸರಾ ಉದ್ಘಾಟನೆ ಭಾಗ್ಯ!
1 min readವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆ ಭಾಗ್ಯ ಮಾಜಿ ಸಿಎಂ ಎಸ್ ಎಂ ಕೃಷ್ಣ ಅವರಿಗೆ ಲಭಿಸಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಈ ಬಾರಿಯ ನಾಡಹಬ್ಬ ದಸರಾವನ್ನ ಎಸ್ ಎಂ ಕೃಷ್ಣ ಅವರು ಉದ್ಘಾಟನೆ ಮಾಡಲಿದ್ದಾರೆ.
ಸಾಲು ಮರದ ತಿಮ್ಮಕ್ಕನ ಹೆಸರು ಕೂಡ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿತ್ತು. ಆದರೆ ಸರ್ಕಾರ ಮಾತ್ರ ಎಸ್ ಎಂ ಕೃಷ್ಣ ಅವರಿಗೆ ಮಣೆ ಹಾಕಿದೆ. ಅಲ್ಲದೆ ಬಿಜೆಪಿಗೆ ಸೇರ್ಪಡೆಯಾಗಿದ್ದರು ಸಹ ಕೃಷ್ಣ ಅವರು ಎಲ್ಲಿಯು ಕಾಣಿಸಿಕೊಂಡಿರಲಿಲ್ಲ. ಇದೀಗಾ ನಾಡಹಬ್ಬ ಉದ್ಘಾಟನೆ ಮಾಡುವ ಸದವಕಾಶ ಇವರಿಗೆ ಲಭಿಸಿದೆ.
ಅ.7ರಂದು ನಡೆಯಲಿರುವ ಮೈಸೂರು ದಸರಾ ಮಹೋತ್ಸವ ಉದ್ಘಾಟನೆಯಾಗಲಿದ್ದು, ನಾಡದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ದಸರಾ ಉದ್ಘಾಟನೆ ಮಾಡಲಿದ್ದಾರೆ ಎಸ್.ಎಂ.ಕೃಷ್ಣ ಅವರು. ಇನ್ನು ಇದೇ ಮೊದಲ ಬಾರಿಗೆ ರಾಜಕೀಯ ಕ್ಷೇತ್ರಕ್ಕೆ ದಸರಾ ಉದ್ಘಾಟನಾ ಭಾಗ್ಯ ಒಲಿದಿದ್ದು, 1999ರಿಂದ 2004ರ ವರೆಗೆ ರಾಜ್ಯದ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದರು.
ಇನ್ನು ಮೂಲತಃ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದವರಾಗಿರುವ ಕೃಷ್ಣ ಅವರು, ಕೇಂದ್ರ ಸಚಿವರು, ವಿಧಾನ ಸಭಾ ಸ್ಪೀಕರ್, ರಾಜ್ಯಪಾಲ, ರಾಜ್ಯಸಭಾ ಸದಸ್ಯರಾಗಿಯು ಸಹ ಕಾರ್ಯ ನಿರ್ವಹಿಸಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಾಂಗ ಮಾಡಿರುವ ಮಾಜಿ ಸಿಎಂ ಕೃಷ್ಣ ಅವರು ಮೈಸೂರಿಗು ಸಹ ಚಿರಪರಿಚಿತರಾಗಿದ್ದಾರೆ.