SSLC ರಿಸಲ್ಟ್ ಅನೌನ್ಸ್- ಓರ್ವ ಫೇಲ್- ಉಳಿದೆಲ್ಲ ವಿದ್ಯಾರ್ಥಿಗಳು ಪಾಸ್!

1 min read

ಕರೋನಾ ವೇಳೆಯ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, 99.9ರಷ್ಟು ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾರೆ.‌ ಈ‌ ಮೂಲಕ ಇದೇ ಮೊದಲ ಬಾರಿಗೆ ಓರ್ವ ವಿದ್ಯಾರ್ಥಿ ಬಿಟ್ಟು ಉಳಿದ್ದೆಲ್ಲ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ.

ಹೌದು ಈ ಬಗ್ಗೆ ಇಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಫಲಿತಾಂಶ ಪ್ರಕಟಿಸಿದ್ದಾರೆ. ಇದರಲ್ಲಿ ಶೇ. 99.9% ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು ಓರ್ವ ವಿದ್ಯಾರ್ಥಿ ಮಾತ್ರ ಬೇರೆ ಅವರಿಂದ ಪರೀಕ್ಷೆ ಬರೆಸಿದ ಕಾರಣ ಆತ ಅನುತೀರ್ಣನಾಗಿದ್ದಾನೆ. ಈ ಬಾರಿ ಡಿಜಿಟಲ್ ಮೂಲಕ ಮೌಲ್ಯಮಾಪನ ಮಾಡಲಾಗಿದ್ದು, ಪೋಷಕರ ನೊಂದಾಯಿತ ಫೋನ್ ನಂಬರ್‌ಗೆ ರಿಸಲ್ಟ್ ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಎಂದು ಸಚಿವ ಬಿಸಿ ನಾಗೇಶ

ವೆಬ್ ಸೈಟ್‌ನಲ್ಲಿ ಫಲಿತಾಂಶ.

ಇನ್ನು www.sslc.karnataka.gov.in ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು ವಿದ್ಯಾರ್ಥಿಗಳು ಈ ಲಿಂಕ್‌ ಮೂಲಕ ಫಲಿತಾಂಶ ನೋಡಬಹುದಾಗಿದೆ ಎಂದು ಸಚಿವರು ಇದೇವೇಳೆ ತಿಳಿಸಿದ್ದಾರೆ.

ಕೊರೋನಾದಿಂದಾಗಿ ಮೊದಲ ಬಾರಿಗೆ ಮಲ್ಟಿಪಲ್ ಚಾಯ್ಸ್ ಪ್ರಶ್ನೆಗಳೊಂದಿಗೆ ಕೇವಲ ಎರಡು ದಿನಗಳ ಕಾಲ ಪರೀಕ್ಷೆ ನಡೆಸಲಾಗಿತ್ತು. ಈ ಬಾರಿ ಒಟ್ಟು 8.76 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಇದರಲ್ಲಿ ಓರ್ವ ಫೇಲ್ ಆಗಿದ್ದು ಉಳಿದವರೆಲ್ಲರು ಪಾಸ್ ಆಗಿದ್ದಾರೆ.

About Author

Leave a Reply

Your email address will not be published. Required fields are marked *