ಮೈಸೂರು ಜಿಲ್ಲೆಯಲ್ಲೂ ಕೊರೊನಾ ಲಸಿಕೆ ಕೊರತೆ: ಮೊದಲನೆ ಡೋಸ್‌ಗೆ ಬಿತ್ತು ಬ್ರೇಕ್
1 min readಮೈಸೂರು: ಮೈಸೂರು ಜಿಲ್ಲೆಯಲ್ಲೂ ಕೊರೊನಾ ಲಸಿಕೆ ಕೊರತೆಯುಂಟಾಗಿದ್ದು ಇದರಿಂದಾಗಿ ಇದುವರೆಗೂ ನಿಡಲಾಗುತ್ತಿದ್ದ ಮೊದಲನೆ ಡೋಸ್‌ಗೆ ಬ್ರೇಕ್ ನಿಡಲಾಗಿದೆ.
ಈ ಬಗ್ಗೆ ಮೈಸೂರು ಆರೊಗ್ಯ ಇಲಾಖೆಯಿಂದ ಅಧಿಕೃತ ಪ್ರಕಟಣೆ ಬಂದಿದೆ. ಜಿಲ್ಲೆಯಲ್ಲಿ 7,74,992 ಡೋಸ್ ಲಸಿಕೆ ನೀಡಲಾಗಿದೆ. ಜಿಲ್ಲೆಯಲ್ಲಿ ಸದ್ಯಕ್ಕೆ 2ನೇ ಡೋಸ್ ಲಸಿಕೆ ಮಾತ್ರ ನೀಡಲಾಗುತ್ತಿದೆ. ಮೊದಲ ಡೋಸ್ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂದೆ ಮೊದಲ ಡೋಸ್ ನೀಡಿವ ದಿನಾಂಕವನ್ನು ತಿಳಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ ಅಮರನಾಥ್ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.