ಶನಿವಾರಸಂತೆಯಲ್ಲಿ 144 ಸೆಕ್ಷನ್ ಜಾರಿ: ಪ್ರತಿಭಟನೆಗೆ ಮುಂದಾದ ಹಿಂದೂ ಸಂಘಟನೆಗಳ ಕಾರ್ಯಕರ್ತರ ಬಂಧನ
1 min readಕೊಡಗು: ಇತ್ತೀಚೆಗೆ ನಡೆದ ಗುಂಪು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿ ಹಿಂದೂ ಸಂಘಟನೆಗಳು ಶನಿವಾರ ಸಂತೆ ಬಂದ್ ಗೆ ಕರೆ ನೀಡಿದ್ದವು.
ಬಂದ್ ಗೇ ಬೆಂಬಲ ಕರೆ ನೀಡಿದ ಬೆನ್ನಲೆ ಶನಿವಾರಸಂತೆ ಠಾಣಾ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿಮಾಡಲಾಗಿತ್ತು. ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಿ ಸೂಕ್ತ ಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನೆ ಹಿನ್ನಲೆ ಅಂಗಡಿ ಮುಂಗಟ್ಟುಗಳು ಸ್ವಯಂಪ್ರೆರಿತ ಬಂದ್ ಮಾಡಲಾಗಿತ್ತು. ಜನಗುಂಪು ಸೇರದಂತೆ ಪೋಲೀಸರು ಮೈಕ್ ಮೂಲಕ ಪ್ರಚಾರ ನಡೆಸಿದರು. ಕುಶಾಲನಗರ ಡಿವೈಎಸ್.ಪಿ, ಶನಿವಾರಸಂತೆ ಸರ್ಕಲ್ ಇನ್ಸ್ಪೆಕಕ್ಟರ್ ನೇತೃತ್ವದಲ್ಲಿ ಬಂದೊಬಸ್ತ್ ಮಾಡಲಾಗಿದೆ.
ಆದರೆ ಕೆ.ಆರ್.ಸಿ ವೃತ್ತದ ಬಳಿ ಹಿಂದೂ ಪರ ಸಂಘಟನೆಗಳು ಸೇರಿದ್ದರು. ಪ್ರತಿಭಟನೆಗೆ ಮುಂದಾಗಿದ್ದ ಹಿಂದೂ ಸಂಘಟಕರನ್ನು ಪೊಲೀಸರು ಬಂಧಿಸಿದರು. ಈ ವೇಳೆ ಪೋಲೀಸರಿಗೆ ಸಂಘಟಕರು ದಿಕ್ಕಾರ ಕೂಗಿದರು.
ಮಾಜಿ ಸೈನಿಕನನ್ನು ಬಿಡದ ಪೋಲೀಸ್ ಇಲಾಖೆ:
ಸ್ಥಳೀಯ ಮಾಜಿ ಸೈನಿಕರೊಬ್ಬರ ವಿವಾಹ ಸಮಾರಂಭಕ್ಕೆ ಹೊರಟಿದ್ದರು. ಇವರನ್ನು ಬಂಧಿಸಲು ಮುಂದಾದಾಗ ಸೈನಿಕ ವಾಹನದ ಚಕ್ರದ ಮುಂಭಾಗವೆ ಮಲಗಿ ಪ್ರತಿಭಟಿಸಿದ ಪ್ರಸಂಗ ನಡೆಯಿತು.