ಕೊರೋನಾ ವಿರುದ್ಧ ಗೆದ್ದ ಶತಾಯುಷಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್ ದೊರೆಸ್ವಾಮಿ ಆಸ್ಪತ್ರೆಯಿಂದ ಡಿಸ್ಚಾರ್ಜ್
1 min readಮೈಸೂರು: ಕೊರೋನಾದಿಂದ ಇಡೀ ದೇಶದಲ್ಲಿ ಯುವಕರ ಸಾವು ಕೂಡ ಹೆಚ್ಚಾಗುತ್ತಿದ್ದು ಇದೀಗಾ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ HS ದೊರೆಸ್ವಾಮಿ ಅವರು ಕರೋನಾ ಗೆದ್ದು ಎಲ್ಲರಿಗು ಮಾದರಿಯಾಗಿದ್ದಾರೆ.
104 ವರ್ಷ ಆಗಿದ್ರು ಇಂದಿಗು ಚಿರ ಯುವಕನಂತೆ ಪುಸ್ತಕ ಓದುತ್ತ ಹೋರಾಟದಲ್ಲಿ ಪಾಲ್ಗೊಳ್ಳುವ ದೊರೆಸ್ವಾಮಿ ಅವರು ಎರಡು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿ ತಮ್ಮ ನಿವಾಸಕ್ಕೆ ತೆರಳಿದ್ದಾರೆ.