ದಶಪಥದ 5 ಬೈಪಾಸ್‌ಗಳಿಗೆ ಎಂಟ್ರಿ ಎಕ್ಸಿಟ್ ಮೂಲಕ ಮೇಲ್ದರ್ಜೆಗೆರಿಸಲು ಕೇಂದ್ರ ಸಚಿವರಿಗೆ ಪ್ರತಾಪ್‌ ಸಿಂಹ ಮನವಿ!

1 min read

ಸಂಸದ ಪ್ರತಾಪ್ ಸಿಂಹ ರವರು ಪ್ರಸ್ತುತ ನಿರ್ಮಾಣವಾಗುತ್ತಿರುವ ಮೈಸೂರು-ಬೆಂಗಳೂರು 10 ಪಥದ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ 06 ಪಟ್ಟಣಗಳನ್ನುಸೇರುವ 05 ಬೈಪಸ್ ಗಳಿಗೆ ಸರಿಯಾದ ಪ್ರವೇಶ ಹಾಗೂ ನಿರ್ಗಮನ ನೀಡುವ ಮೂಲಕ ಮೇಲ್ದರ್ಜೆಗೇರಿಸುವಂತೆ ಮತ್ತು ಎನ್.ಹೆಚ್-373 ಪ್ಯಾಕೇಜ್-02 ಹಾಸನ-ಬೇಲೂರು ಹಾಗೂ ಪ್ಯಾಕೇಜ್-04 ಎಡೆಗೌಡನಹಳ್ಳಿ-ಬಿಳಿಗೆರೆ ಎರಡು ಪಥದ ರಸ್ತೆಯನ್ನು ನಾಲ್ಕು ಪಥದ ರಸ್ತೆಗೆ ಮೇಲ್ದರ್ಜೆಗೇರಿಸುವಂತೆ ಕೋರಿ ಕೇಂದ್ರ ಭೂ ಸಾರಿಗೆ, ಹೆದ್ದಾರಿ ಹಾಗೂ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರನ್ನು ಇಂದು ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಚನ್ನರಾಯಪಟ್ಟಣ, ಅರಕಲಗೂಡು, ಶನಿವಾರಸಂತೆ, ಸೋಮವಾರಪೇಟೆ, ಮಡಿಕೇರಿ, ವಿರಾಜಪೇಟೆ ಮೂಲಕ ಮಾಕುಟ್ಟ ಬಳಿ ಕೇರಳಕ್ಕೆ ಸಂಪರ್ಕ ಕಲ್ಪಿಸುವ 183 ಕಿ.ಮೀ. ಉದ್ದದ 1600 ಕೋಟಿ ವೆಚ್ಚದ ಹೆದ್ದಾರಿ ನಿರ್ಮಾಣ ಯೋಜನೆಗೆ ಅಂತಿಮ ಒಪ್ಪುಗೆ ನೀಡಲು ಕೇಂದ್ರ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿಯವರು ಸಮ್ಮತಿ ನೀಡಿದ್ದು, ಸಂಸದ ಪ್ರತಾಪ್ ಸಿಂಹ ಧನ್ಯವಾದಗಳು ತಿಳಿಸಿದ್ದಾರೆ.

About Author

Leave a Reply

Your email address will not be published. Required fields are marked *