ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ- ಆದರು ಹಂಗಾಮಿ ಸಿಎಂ ಆದ ಬಿಎಸ್ವೈ.!
1 min read![](https://nannurumysuru.com/wp-content/uploads/2021/07/FB_IMG_1627289440343_copy_1024x684.jpg)
ಬಿಎಸ್ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮಾಜಿ ಸಿಎಂ ಆಗಿದ್ದರು ಸಹ ಅವರಿಗೆ ರಾಜ್ಯಪಾಲರು ಹಂಗಾಮಿ ಸಿರಂ ಆಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಬಿಎಸ್ವೈ ಸಂಪುಟದ ಸಚಿವರೆಲ್ಲರು ಕೂಡ ಇದೀಗಾ ಮಾಜಿ ಸಚಿವರಾಗಿದ್ದಾರೆ.
![](https://nannurumysuru.com/wp-content/uploads/2021/07/IMG-20210726-WA0074-826x1024.jpg)
ಹೌದು, ರಾಜ್ಯಪಾಲರು ಯಡಿಯೂರಪ್ಪ ರಾಜೀನಾಮೆ ಪಡೆದು ಸಚಿವ ಸಂಪುಟವನ್ನ ವಿಸರ್ಜನೆ ಮಾಡಿದ್ದು ಈ ಮೂಲಕ ಹಾಲಿ ಸಚಿವರೆಲ್ಲರು ಮಾಜಿ ಸಚಿವರಾಗಿದ್ದಾರೆ. ಆದರೆ ಆಡಳಿತ ದೃಷ್ಠಿಯಿಂದ ಯಡಿಯೂರಪ್ಪನವರನ್ನೆ ಮುಂದಿನ ಸಿಎಂ ಆಯ್ಕೆ ಆಗುವವರೆಗೂ ಹಂಗಾಮಿ ಸಿಎಂ ಆಗಿ ರಾಜ್ಯಪಾಲರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
![](https://nannurumysuru.com/wp-content/uploads/2023/09/Nayana-Kumars.jpg)
![](https://nannurumysuru.com/wp-content/uploads/2021/07/IMG-20210726-WA0073-768x1024.jpg)
ನಾಳೆ ಕೇಂದ್ರದಿಂದ ಬಿಜೆಪಿ ವೀಕ್ಷಕರು ಬಂದ ಬಳಿಕ ಸಿಎಂ ಅಭ್ಯರ್ಥಿ ಯಾರೆಂದು ಫೈನಲ್ ಆಗಲಿದ್ದು, ಸಿಎಂ ಪ್ರಮಾಣ ವಚನ ಸ್ವೀಕಾರದ ವರೆಗು ಯಡಿಯೂರಪ್ಪ ಹಂಗಾಮಿ ಸಿಎಂ ಆಗಿರಲಿದ್ದಾರೆ.