ಮೈಸೂರಿನಲ್ಲಿ ಅರ್ಥಪೂರ್ವಕವಾಗಿ ವಿಶ್ವ ಭೂ ದಿನ ಆಚರಣೆ
1 min readಮೈಸೂರು: ಎಲ್ಲದಕ್ಕೂ ದಿನಾಚರಣೆಯಿರುವಂತೆ ಇಂದು ವಿಶ್ವ ಭೂ ದಿನ ಆಚರಣೆ ಅರ್ಥಪೂರ್ವಕವಾಗಿ ಇರಬೇಕು ಎಂದರೆ ಮೊದಲು ಭೂಮಿಯ ಆರೋಗ್ಯದ ಬಗ್ಗೆ ನಾವು ಯೋಚಿಸಬೇಕಿದೆ ಮೊದಲಿಗೆ ಭೂಮಿ ವಿಶಯುಕ್ತವಾಗಬಾರದು ಭೂಮಿಯ ಆರೋಗ್ಯ ದುಪ್ಪಟ್ಟು ಆಗಬೇಕು ಆಗ ಮಾತ್ರ ದಿನಾಚರಣೆ ಸಾರ್ಥಕ
ಕೋವಿಡ್ ಸಮಯದಲ್ಲಿ ಆಕ್ಸಿಜನ್ ಕೊರತೆ ಇರುವುದನ್ನು ನಾವು ಕಂಡಿದ್ದೇವೆ ಭೂಮಿಯ ಆರೋಗ್ಯ ಶಕ್ತಿಯುತವಾಗಿದ್ದರೆ ಆಕ್ಸಿಜನ್ ಕೊರತೆ ಬಾದಿಸದು ಎಂದು ಅರಿತ ನಮ್ಮೂರು ನಮ್ಮೋರು ಸಮಾಜ ಸೇವಾ ಟ್ರಸ್ಟಿನ ಸದಸ್ಯರು ವಿಜಯನಗರ 1 ನೇ ಹಂತ ವಾರ್ಡ್ ನಂ 20 ರಲ್ಲಿ ಮನೆಗೊಂದು ಹಸಿರು ಎಂಬ ಪರಿಕಲ್ಪನೆಯೊಂದಿಗೆ ಅಭಿಯಾನ ಆರಂಭಿಸಿದ್ದು ಪ್ರಾರಂಭಿಕ ಹಂತದಲ್ಲಿ ಕೆಲವು ಆಯ್ದ ರಸ್ತೆಯ ಮನೆಗಳಿಗೆ ವಿತರಿಸುವ ಕಾರ್ಯಕ್ರಮಕ್ಕೆ ಹಿರಿಯ ಸಾಹಿತಿ ಡಾ ಸಿಪಿಕೆ ಅವರಿಗೆ ಸಸಿ ಹಸ್ತಾಂತರಿಸುವ ಮೂಲಕ ಚಾಲನೆ ನೀಡಲಾಯಿತು.
ಈ ವೇಳೆ ಮಾತನಾಡಿದ ಡಾ ಸಿಪಿಕೆ ಹಿಸಿರಿದ್ದರೆ ಮಾತ್ರವೆ ಉಸಿರು ಹಾಗಾಗಿ ಭೂಮಿ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ನಮ್ಮ ಆರೋಗ್ಯ ಕಾಪಾಡಿಕೊಳ್ಳುವ ಚಿಂತನೆ ಮಾಡಬೇಕಿದೆ ಎಂದು ಶುಭ ಹಾರೈಸಿದರು ಮುಂದುವರೆದು ಮನುಷ್ಯನ ಹುಟ್ಟು ಸಾವಿನ ನಡುವೆ ಒಂದು ಗಿಡ ನೆಟ್ಟು ಪೋಷಿಸಿ ಹೆಮ್ಮರವಾಗಿಸುವದಾದರೆ ಆ ಬದುಕು ಸಾರ್ಥಕ ಎಂದರು ಅಂಗೆ ನೋಡಿದರೆ ನಮ್ಮ ರೈತಾಪಿ ವರ್ಗ ಈ ನಿಟ್ಟಿನಲ್ಲಿ ಶಾಸ್ವಥ ಕೀರ್ತಿಪ್ರಾಯರು ಎಂದು ಅಭಿಪ್ರಾಯ ಪಟ್ಟರು.
ಈ ಸಂಧರ್ಭದಲ್ಲಿ ಅಧ್ಯಕ್ಷರಾದ ಸತೀಶ್ ಗೌಡ, ಟ್ರಸ್ಟಿನ ಪ್ರಧಾನ ಕಾರ್ಯದರ್ಶಿ ಹಾಗು ನನ್ನ ವಾರ್ಡು ನನ್ನ ಕನಸು ಎಂಬ ಪರಿಕಲ್ಪನೆಯ ರವಿ ಎ. ದಂತ ವೈದ್ಯ ಲೋಕೇಶ್ ಹಾಜರಿದ್ದರು.