ಜಿಲ್ಲಾದ್ಯಾಂತ ವಿಶ್ವ ಪುಸ್ತಕ ದಿನ ಆಚರಣೆ
1 min readಮೈಸೂರು: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಜಿಲ್ಲಾ ಕೇಂದ್ರ ಗ್ರಂಥಾಲಯದ ವತಿಯಿಂದ ಜಿಲ್ಲೆಯ ವಿವಿಧ ಗ್ರಂಥಾಲಯಗಳಲ್ಲಿ ಶುಕ್ರವಾರ ಪುಸ್ತಕ ಪ್ರದರ್ಶನ ಏರ್ಪಡಿಸುವ ಮೂಲಕ ವಿಶ್ವ ಪುಸ್ತಕ ದಿನಾಚರಣೆಯನ್ನು ಆಚರಿಸಲಾಯಿತು.
ಮೈಸೂರು ನಗರದಲ್ಲಿ ಸಯ್ಯಾಜಿರಾವ್ ರಸ್ತೆಯ ಕೇಂದ್ರ ಗ್ರಂಥಾಲಯ, ಕುವೆಂಪು ಜ್ಞಾನತಾಣ ಗ್ರಂಥಾಲಯ, ವಿವೇಕಾನಂದನಗರ, ಜಯಲಕ್ಷ್ಮಿಪುರಂ, ಜೆ.ಪಿ ನಗರ, ಹೆಬ್ಬಾಳ್, ನಿವೇದಿತಾ ನಗರ, ಚಾಮುಂಡಿಪುರಂ, ಅಶೋಕಪುರಂ, ಜಯನಗರ, ಸರಸ್ವತಿಪುರಂ, ರಾಮಕೃಷ್ಣನಗರ, ಸಿದ್ಧಾರ್ಥನಗರ, ಪಿ.ಕೆ. ಸ್ಯಾನಿಟೊರಿಯಂ, ಲಲಿತಾಮಹಲ್ನಗರ ಗ್ರಂಥಾಲಯಗಳಲ್ಲಿ ಆಚರಿಸಲಾಯಿತು.
ಜಿಲ್ಲೆಯಲ್ಲಿ ತಿ.ನರಸೀಪುರ ಗ್ರಂಥಾಲಯ, ಬನ್ನೂರು, ಸರಗೂರು, ನಂಜನಗೂಡು, ಹುಣಸೂರು, ಹೆಚ್.ಡಿ.ಕೋಟೆ ಗ್ರಂಥಾಲಯಗಳಲ್ಲೂ ಪುಸ್ತಕ ಪ್ರದರ್ಶನ ಏರ್ಪಡಿಸಿ ವಿಶ್ವ ಪುಸ್ತಕ ದಿನಾಚರಣೆಯನ್ನು ಆಚರಿಸಲಾಯಿತು ಎಂದು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕರಾದ ಬಿ.ಮಂಜುನಾಥ್ ಅವರು ಮಾಹಿತಿ ನೀಡಿದ್ದಾರೆ.