ನಂಜನಗೂಡಿನ ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಜನರ ಅಸಡ್ಡೆ: ಪ್ರತಿನಿತ್ಯ ಭಾರೀ ಜನಜಂಗುಳಿ

1 min read

ಮೈಸೂರು: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಕಾರ್ಪೊರೇಷನ್ ಬ್ಯಾಂಕ್‌ನಲ್ಲಿ ಜನರ ಅಸಡ್ಡೆ. ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಪ್ರತಿನಿತ್ಯ ಭಾರೀ ಜನಜಂಗುಳಿ. ಇಡೀ ದೇಶವೇ ಕೊರೋನಾಗೆ ಬೆಚ್ಚಿಬಿದ್ದಿದ್ದರೂ ಹುಲ್ಲಹಳ್ಳಿ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಮಾತ್ರ ಇದರ ಭಯವಿಲ್ಲ. ಸಾಮಾಜಿಕ ಅಂತರವಿಲ್ಲದೇ, ಸ್ಯಾನಿಟೈಸ್ ಇಲ್ಲದೆ ನೂರಾರು ಸಂಖ್ಯೆಯಲ್ಲಿ ಪ್ರತಿನಿತ್ಯ ಗುಂಪು ಗೂಡುತ್ತಿರುವ ಗ್ರಾಹಕರು.

ನಂಜನಗೂಡು ತಾಲೂಕಿನ ದೊಡ್ಡ ಹೋಬಳಿ ಕೇಂದ್ರವಾಗಿರುವ ಹುಲ್ಲಹಳ್ಳಿ ಪಟ್ಟಣ. ಹೋಬಳಿ ಕೇಂದ್ರದಲ್ಲಿರುವ ಇರುವ ಒಂದೇ ಕಮರ್ಷಿಯಲ್ ಬ್ಯಾಂಕಿಗೆ ಮುಗಿಬೀಳುತ್ತಿರುವ ಗ್ರಾಹಕರು.

ಹುಲ್ಲಹಳ್ಳಿ ಹೋಬಳಿ ಕೇಂದ್ರಕ್ಕೆ ಸೇರಿರುವ ಹತ್ತಾರು ಹಳ್ಳಿಗಳ ಸಾರ್ವಜನಿಕರಿಂದ ಕಾರ್ಪೊರೇಷನ್ ಬ್ಯಾಂಕ್ ಗೆ ದಿನ ನಿತ್ಯ ಅಲೆದಾಟ.

ಕಾರ್ಪೊರೇಷನ್ ಬ್ಯಾಂಕಿನಲ್ಲಿ ಸಿಬ್ಬಂದಿಗಳ ಕೊರತೆಯಿಂದ ಗ್ರಾಹಕರ ಕೆಲಸ ಕಾರ್ಯಗಳು ಸರಿಯಾದ ರೀತಿಯಲ್ಲಿ ನಡೆಯುತ್ತಿಲ್ಲವೆಂದು ದೂರುತ್ತಿರುವ ಗ್ರಾಹಕರು. ಬ್ಯಾಂಕ್ ನಲ್ಲಿ ಸಿಬ್ಬಂದಿಗಳ ಕೊರತೆಯಿಂದಾಗಿ ಯಾವುದೇ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ.

ಪರಿಣಾಮ ದಿನನಿತ್ಯ ಜನ ಜಂಗುಳಿಯಿಂದಾಗಿ ಕೋರೋನಾ-ನಿಯಮಗಳನ್ನು ಪಾಲಿಸಲಾಗುತ್ತಿಲ್ಲ. ಸರ್ಕಾರದ ಕೊರೋನಾ ನಿಯಮಾವಳಿಗಳಿಗೆ ಸಡ್ಡುಹೊಡೆದ ಕಾರ್ಪೊರೇಷನ್ ಬ್ಯಾಂಕ್. ಬ್ಯಾಂಕ್ ಕೆಲಸಕ್ಕಾಗಿ ತಮ್ಮ ಕೆಲಸಗಳನ್ನು ಬಿಟ್ಟು ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಗುಂಪು ಗೂಡುತ್ತಿರುವ ಗ್ರಾಹಕರಿಂದ ಕೊರೋನಾ ನಿಯಮಾವಳಿಗಳ ಉಲ್ಲಂಘನೆ. ಜಿಲ್ಲಾ ಮತ್ತು ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳದೇ ಮೈಮರೆತರೆ ಹುಲ್ಲಹಳ್ಳಿಯೂ ಮಹಾಮಾರಿ ಕೊರೋನಾ ಸೋಂಕಿನ ಹಾಟ್ ಸ್ಪಾಟ್ ಆಗುವ ಆತಂಕ.

ಹುಲ್ಲಹಳ್ಳಿಯಲ್ಲಿ ಮತ್ತೊಂದು ವಾಣಿಜ್ಯ ಬ್ಯಾಂಕ್ ತೆರೆದು ಗ್ರಾಹಕರ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರ ಒತ್ತಾಯ.

About Author

Leave a Reply

Your email address will not be published. Required fields are marked *