ವೀಕೆಂಡ್ ಕರ್ಫ್ಯೂಗೆ ವಿರೋಧ- ಅರಸು ರಸ್ತೆಯ ಮಳಿಗೆಗಳ ಬಳಿ ನಿಂತು ಪ್ರತಿಭಟನೆ!
1 min read
ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ವಿರೋಧಿಸಿ ಮೈಸೂರಿನ ಸಂಘಸಂಸ್ಥೆಗಳು ಹಾಗೂ ವ್ಯಾಪಾರಸ್ಥರು ಮೈಸೂರಿನ ಅರಸು ರಸ್ತೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ಮೈಸೂರಿನ ಅರಸು ರಸ್ತೆಯ ಮಳಿಗೆಗಳ ಮುಂಭಾಗದಲ್ಲಿ ನಿಂತು ಪ್ರತಿಭಟನೆ ನಡೆಸಿದ ಇವರು, ಕಪ್ಪು ಬಟ್ಟೆ ಹಾಗೂ ಕಪ್ಪು ಪಟ್ಟಿಯನ್ನ ಧರಿಸಿ ವೀಕೆಂಡ್ ಕರ್ಫ್ಯೂಗೆ ವಿರೋಧ ವ್ಯಕ್ತಪಡಿಸಿದರು.

ಒಂದು ಗಂಟೆಗಳ ಕಾಲ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ್ದು ಅರಸು ರಸ್ತೆ ಉದ್ದಕ್ಕೂ ಅಂಗಡಿ ಮಳಿಗೆಗಳ ಮುಂಭಾದಲ್ಲೇ ನಿಂತು ಪ್ರತಿಭಟನೆ ನಡೆಸಿದರು. ಅಲ್ಲದೆ ಈ ವೀಕೆಂಡ್ ಕರ್ಫ್ಯೂ ತೆರವು ಮಾಡುವಂತೆ ಸಂಘಸಂಸ್ಥೆಗಳ ಒಕ್ಕೂಟ ಆಗ್ರಹಿಸಿದರು. ಈ ವೇಳೆ ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
