ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂಗೆ ವಿರೋಧ- ಕಪ್ಪು ಬಟ್ಟೆ ತೊಟ್ಟು ಸರ್ಕಾರದ ವಿರುದ್ಧ ಸಂಘ ಸಂಸ್ಥೆಗಳ ನೈತಿಕ ಪ್ರೊಟೆಸ್ಟ್!
1 min readಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ಆದೇಶವಾಗಿದ್ದು ಸಂಘ ಸಂಸ್ಥೆಗಳು, ವ್ಯಾಪಾರಸ್ಥರು ಇದರ ವಿರೋಧ ಆಕ್ರೋಶ ಹೊರಹಾಕಿದ್ದಾರೆ. ಈಗಾಗಲೇ ವ್ಯಾಪಾರ ವಹಿವಾಟು ಇಲ್ಲ. ಈ ವೇಳೆ ವೀಕೆಂಡ್ ಕರ್ಫ್ಯೂ ಮಾಡಿ ನಮ್ಮನ್ನ ಹಾಳು ಮಾಡುತ್ತಿದ್ದೀರಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ ಇಂದು ಬೆಳಗ್ಗೆ 10 ಗಂಟೆಯಿಂದ ಅರಸು ರಸ್ತೆ, ಸಂತೇಪೇಟೆ, ಮನ್ನರ್ಸ್ ಮಾರುಕಟ್ಟೆ ಬಳಿಯ ಅಂಗಡಿ ಮುಂಭಾಗದಲೇ ಕುಳಿತು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಲು ಮೈಸೂರು ಸಂಘ ಸಂಸ್ಥೆಗಳು ನಿರ್ಧಿಸಿವೆ.
-ಇದರಿಂದ ಇಂದು ಬೆಳಗ್ಗೆ ಮೈಸೂರಿನಲ್ಲಿ ಆಕ್ರೋಶ ಬುಗ್ಗೆ ಹೆಚ್ಚಾಗಿ ಒಂದೊಂದು ಮಳಿಗೆ ಬಳಿಯು ಇಬ್ಬರಂತೆ ನೂರಾರು ಸಂಖ್ಯೆಯ ವ್ಯಾಪಾರಸ್ಥರು ಸಾಮಾಜಿಕ ಅಂತರ ಕಾಯ್ದುಕೊಂಡು ಮಳಿಗೆ ತೆರೆಯದೆ ವಿನೂತನವಾಗಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಮೂಲಕ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತೀರ್ಮಾನ ಮಾಡಿದೆ. ಆದರೆ ವೀಕೆಂಡ್ ಕರ್ಫ್ಯೂ ವೇಳೆ ಅನಗತ್ಯ ಓಡಾಟ ಬೇಡ- ಗುಂಪು ಸೇರಿದರೆ ನಾವು ಕಾನೂನಿನ ಮೂಲಕ ಕ್ರಮ ಕೈಗೊಳ್ಳುತ್ತೇವೆಂದು ನಗರ ಪೊಲೀಸ್ ಆಯುಕ್ತರಾದ ಡಾ.ಚಂದ್ರಗುಪ್ತ ಅವರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.