ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ಬಗ್ಗೆ ಮಹತ್ವದ ಮಾಹಿತಿ!
1 min read
ಮೈಸೂರು : ನಾಳೆಯು ಮೈಸೂರಿನಲ್ಲಿ ವೀಕೆಂಡ್ ಕರ್ಫ್ಯೂ ಮುಂದುವೆಯಲಿದೆ ಎಂದು ಜಿಲ್ಲಾಢಳಿತದ ಮೂಲಗಳು ತಿಳಿಸಿವೆ. ಈಗಾಗಲೇ ಎರಡು ವಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆದರು ಮೈಸೂರಿನಲ್ಲಿ ವಿಕೆಂಡ್ ಕರ್ಫ್ಯೂ ತೆರವು ಮಾಡುವಂತೆ ಇದರಿಂದ ರಿಯಾಯಿತಿ ನೀಡುವಂತೆ ಹಲವು ಸಂಘ ಸಂಸ್ಥೆಗಳು ವ್ಯಾಪಾರಸ್ಥರು ಮನವಿ ಮಾಡಿದ್ದರು. ಮನವಿ ಆಲಿಸಿದ ಉಸ್ತುವಾರಿ ಸಚಿವರು, ಸಿಎಂ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತರುವ ಕೆಲಸ ಮಾಡಿದರು. ಆದರೆ ಸಿಎಂ ಮಾತ್ರ ರಿಯಾಯಿತಿ ನೀಡಲು ಆಗಲ್ಲ. ಕೋವಿಡ್ ಸಮಸ್ಯೆ ಕಂಟ್ರೋಲ್ ಮಾಡಲು ಈ ಕ್ರಮ ಅಗತ್ಯ ಎಂದರು. ಇದರಿಂದ ಈ ವಾರವು ಅಂದರೆ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಇದ್ದು, ಬೆಳಗ್ಗೆ 5 ರಿಂದ ಮಧ್ಯಾಹ್ನ 2 ಗಂಟೆಯ ವರೆಗು ಅಗತ್ಯ ವಸ್ತು ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಎಂದಿನಂತೆ ಹೋಟೆಲ್‌ನಲ್ಲಿ ಪಾರ್ಸೆಲ್ ವ್ಯವಸ್ಥೆ ಇದ್ದು, 2 ಗಂಟೆ ಬಳಿಕ ಮೈಸೂರು ಜಿಲ್ಲೆ ಸ್ತಬ್ಧವಾಗಲಿದೆ.