ವೀರಪ್ಪನ್ ದಾಳಿಯಿಂದ ಹುತಾತ್ಮರಾದ ಪೊಲೀಸರಿಗೆ ಗೌರವ ಸಮರ್ಪಣೆ

1 min read

ಈ ದಿನ ನಿಮಗೆ ಗೊತ್ತಿರಲಿಕ್ಕೆ ಇಲ್ಲ. ಯಾಕಂದ್ರೆ ಅದು ಕಾಡುಗಳ್ಳ ವೀರಪ್ಪನ್ ಬೇಟೆಯಾಡಲು ಸಜ್ಜಾಗಿದ್ದ ದಿನ. ಆ ವೇಳೆ ಹಗಲು ರಾತ್ರಿ ಎನ್ನದೆ ಸಾಕಷ್ಟು ಪೊಲೀಸರು ಕಾರ್ಯಾಚರಣೆಗಾಗಿ ಇಳಿದಿದ್ದರು‌. ಆದರೆ ಅದರಲ್ಲಿ ಅನೇಕರು ಮೃತಪಟ್ಟು ಮತ್ತೇ ಕೆಲವರು ಗಾಯಗೊಂಡು ಹಾಸಿಗೆ ಸೇರಿಕೊಂಡಿದ್ದರು. ಈ ದಿ‌ನವನ್ನ ಸ್ಮರಣೆ ಮಾಡುವ ಸಲುವಾಗಿ ಮೈಸೂರು ಜಿಲ್ಲಾ ಪೊಲೀಸರು ಹುತಾತ್ಮರಾದ ಪೊಲೀಸರಿಗೆ ಇಂದು ಗೌರವ ಸಮರ್ಪಣೆ ಮಾಡಿದ್ದಾರೆ.

ಹುತಾತ್ಮರಿಗೆ ಗೌರವ ಸಲ್ಲಿಸಿದ ಮೈಸೂರು ಎಸ್‌ಪಿ ಚೇತನ್ ಆರ್.

-1992ರ ಆಗಸ್ಟ್ 14 ರಂದು ಮೀಣ್ಯಂ ನಲ್ಲಿ ವೀರಪ್ಪನ್ ದಾಳಿಗೆ ಹುತಾತ್ಮರಾದ ಪೊಲೀಸರಿಗೆ ಹೂಗುಚ್ಛ ಇಟ್ಟು ಗೌರವ ಸಮರ್ಪಣೆ ಮಾಡಲಾಯಿತು. ಅಂದಿನ ಅವಿಭಜಿತ ಮೈಸೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಟಿ.ಹರಿಕೃಷ್ಣ, ಐಪಿಎಸ್ ಮತ್ತು ಪಿಎಸ್ಐ ಶ್ರೀ.ಶಖೀಲ್ ಅಹಮ್ಮದ್ ರವರು ಹಾಗೂ ಈ ದಾಳಿಯಲ್ಲಿ ಹುತಾತ್ಮರಾದ ಪೊಲೀಸ್ ಸಿಬ್ಬಂದಿಗಳನ್ನು ಗೌರವ ಪೂರ್ವಕವಾಗಿ ಸ್ಮರಿಸಲಾಯಿತು. ಜಿಲ್ಲಾ ಪೊಲೀಸ್ ಕಛೇರಿ ವೃತ್ತದಲ್ಲಿರುವ ಹುತಾತ್ಮ ಶ್ರೀ.ಟಿ.ಹರಿಕೃಷ್ಣ, ಐಪಿಎಸ್ ರವರ ಪುತ್ಥಳಿಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಚೇತನ್ ಐಪಿಎಸ್ ರವರು ಹೂಗುಚ್ಚ ಇರಿಸಿ ವಂದನೆ ಸಮರ್ಪಿಸಿದರು. ಈ ವೇಳೆ ಅಪರ ಪೊಲೀಸ್ ಅಧೀಕ್ಷರಾದ ಶ್ರೀ.ಆರ್.ಶಿವಕುಮಾರ್ ರವರು ಸಹ ಗೌರವ ವಂದನೆ ಸಮರ್ಪಿಸಿದರು.

About Author

Leave a Reply

Your email address will not be published. Required fields are marked *