100 ಹಾಸಿಗೆಗಳ ಕೋವಿಡ್ ಹೆಲ್ತ್ ಸೆಂಟರ್ ಆಗಿ ಉದ್ಘಾಟನೆಗೊಂಡ ತುಳಸಿ ದಾಸ್ ಆಸ್ಪತ್ರೆ
1 min readಮೈಸೂರು: ಮೈಸೂರಿನ ಜೆ.ಎಲ್.ಬಿ ರಸ್ತೆಯಲ್ಲಿರು ತುಳಸಿದಾಸ ಆಸ್ಪತ್ರೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ಕಾವೇರಿ ಆಸ್ಪತ್ರೆಯ ಸಹಯೋಗದಲ್ಲಿ ಸೇಠ್ ಮೋಹನದಾಸ್ ತುಳಸಿದಾಸ್ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ 100 ಹಾಸಿಗೆಗಳ ಡಿಸಿಗ್ನೇಟೆಡ್ ಕೋವಿಡ್ ಹೆಲ್ತ್ ಸೆಂಟರನ್ನು ಸಚಿವ ಎಸ್.ಟಿ.ಸೋಮಶೇಖರ್ ಅವರು ಇಂದು ಉದ್ಘಾಟಿಸಿದರು.
ಕೃಷ್ಣಮೂರ್ತಿಪುರಂನಲ್ಲಿರುವ ತುಳಸಿದಾಸ ಆಸ್ಪತ್ರೆಯಲ್ಲಿ ನಿರ್ಮಾಣವಾಗಿರುವ ಕೋವಿಡ್ ಸೆಂಟರ್’ನಲ್ಲಿ 70 ಆಕ್ಸಿಜನ್ ಬೆಡ್, 10 ಐಸಿಯು ಬೆಡ್ ನಿರ್ಮಾಣ ಮಾಡಲಾಗಿದೆ. 50 ಹಾಸಿಗೆಯಲ್ಲಿ ಟ್ರಯಲ್ ರನ್ ನಡೆದಿದೆ. ಉಳಿದ 50 ಹಾಸಿಗೆಗಳನ್ನು ಮುಂದಿನ ವಾರದೊಳಗಾಗಿ ಪೂರ್ಣ ಪ್ರಮಾಣದ ಹಾಸಿಗೆಗಳನ್ನು ಸಿದ್ಧಗೊಳ್ಳಲಿದೆ. ಹತ್ತು ಬೆಡ್ ಆಕ್ಸಿಜನ್ ಉಳ್ಳ ಐಸಿಯು ವಿತ್ ವೆಂಟಿಲೇಟರ್ ಹಾಸಿಗೆಗಳು ಮುಂದಿನ ವಾರದಿಂದ ಪ್ರಾರಂಭವಾಗಲಿದೆ. 6 ವೈದ್ಯರು, 40 ನರ್ಸಿಂಗ್ ಸಿಬ್ಬಂದಿ, 24*7 ಕೆಲಸ ನಿರ್ವಹಿಸುತ್ತಾರೆ. (6ವೈದ್ಯರು, 1ಐಸಿಯು ತಜ್ಞರು, 1ಶ್ವಾಸಕೋಶ ತಜ್ಞರು, 1ಜನರಲ್ ಫಿಜಿಶಿಯನ್ ) ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳನ್ನು ಕಾವೇರಿ ಆಸ್ಪತ್ರೆ ಮೈಸೂರು ಇವರು ಪ್ರೋತ್ಸಾಹಿಸಿರುತ್ತಾರೆ.
ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್ ಸೇರಿ ಮತ್ತಿತರರು ಭಾಗಿಯಾಗಿದ್ದರು.