ಮೈಸೂರಿನಲ್ಲಿ ಇಂದು 131ಮಂದಿ ಕರೋನಾ ಸೋಂಕಿತರು ಡಿಸ್ಚಾರ್ಜ್- ಇಬ್ಬರು ಸಾವು!
1 min readಮೈಸೂರು : ಮೈಸೂರಿನಲ್ಲಿಂದು 88 ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,74767 ಕ್ಕೇರಿಕೆಯಾಗಿದೆ. ಇಂದು 131 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಇದುವರೆಗೂ 1,71,340 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇತ್ತ ಸಕ್ರಿಯ ಪ್ರಕರಣಗಳ ಸಂಖ್ಯೆ 1087ಕ್ಕೆ ಇಳಿಕೆಯಾಗಿದ್ದು ಇಂದು ಇಬ್ಬರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಮೈಸೂರಿನಲ್ಲಿ ಇದುವರೆಗೆ 2340 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.