ಮೈಸೂರಿನಲ್ಲಿ 103 ಹೊಸ ಪಾಸಿಟಿವ್ ಕೇಸ್- 95 ಮಂದಿ ಡಿಸ್ಚಾರ್ಜ್!
1 min readಮೈಸೂರು : ಮೈಸೂರಿನಲ್ಲಿಂದು 103ಕೊರೊನಾ ವೈರಸ್ ಸೋಂಕಿನ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು ಈ ಮೂಲಕ ಕೊರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,74993 ಕ್ಕೇರಿಕೆಯಾಗಿದೆ. ಇಂದು 95 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು ಇದುವರೆಗೂ 1,71,614 ಮಂದಿ ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.
ಇತ್ತ ಸಕ್ರಿಯ ಪ್ರಕರಣಗಳ ಸಂಖ್ಯೆ 1033ಕ್ಕೆ ಏರಿಕೆಯಾಗಿದ್ದು ಇಂದು ಮೂವರು ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ ಮೈಸೂರಿನಲ್ಲಿ ಇದುವರೆಗೆ 2346 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.