ಲಾಕ್ಡೌನ್ ನಡುವೆ ಮೈಸೂರಿನಲ್ಲಿ ಹುಲಿ ಕಾಟ: ಹುಲಿ ಪತ್ತೆಗೆ ಸಾಕಾನೆಗಳಿಂದ ಕೂಂಬಿಂಗ್
1 min readಮೈಸೂರು: ಲಾಕ್ಡೌನ್ ನಡುವೆ ಮೈಸೂರಿನಲ್ಲಿ ಹುಲಿ ಕಾಟ ಹೆಚ್ಚಾಗಿದ್ದು, ಕಳೆದ ಎರಡು ವಾರಗಳಿಂದ ಕಾಡಂಚಿನ ಗ್ರಾಮದಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡುತ್ತಿದೆ.
ಹುಣಸೂರು ತಾಲ್ಲೂಕಿನ ಕಚುವಿನಹಳ್ಳಿ ದೊಡ್ಡಹೆಜ್ಜೂರು ದಾಸನಪುರ ಹನಗೋಡು ನೇಗತ್ತೂರು ಗ್ರಾಮಗಳಲ್ಲಿ ಆತಂಕ ಮನೆಮಾಡಿದೆ. ಹುಲಿ ಪತ್ತೆಗೆ ಸಾಕಾನೆಗಳಿಂದ ಕೂಂಬಿಂಗ್ ನಡೆಸಲಾಗುತ್ತಿದೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿಯಿಂದ ನಡೆದ ಕೂಂಬಿಂಗ್ ವೇಳೆ ಹುಲಿ ಪತ್ತೆಯಾಗಿಲ್ಲ.
ಅಲ್ಲಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿರುವ ಹುಲಿ:
ಮೇ 3 ನೇಗತ್ತೂರಿನಲ್ಲಿ ಹಸುವಿನ ಮೇಲೆ ದಾಳಿ ಮಾಡಿತ್ತು. ಮೇ 6ರಂದು ಕಚುವಿನಹಳ್ಳಿ ಸಿದ್ದೇಗೌಡರ ಜಾನುವಾರುವಿನ ಮೇಲೆ ದಾಳಿ. ಮೇ 8ರಂದು ದಾಸನಪುರದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವಿನ ಮೇಲೆ ದಾಳಿ. ಮೇ 10 ರಂದು ದೊಡ್ಡಹೆಜ್ಜೂರಿನಲ್ಲಿ ಮೇಕೆ ಮೇಲೆ ದಾಳಿ. ಮೇ 12 ರಲ್ಲಿ ಲಕ್ಕ ಪಟ್ಟಣ ಮೀಸಲು ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಹುಲಿ. ಮೇ 14ರಂದು ಶೆಟ್ಟಳ್ಳಿ ಲಕ್ ಪಟ್ಟಣ ಗಿರಿಜನರ ಬಾಳೆ ತೋಟ ಹಾಗೂ ಜಮೀನಿನಲ್ಲಿ ಕಾಣಿಸಿಕೊಂಡ ಹುಲಿ. ಮೇ 18ರಂದು ವೀರ ತಮ್ಮನಹಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿತ್ತು. ಹೀಗಾಗಿ ಬಲರಾಮ, ಕೃಷ್ಣ, ಗಣೇಶ ಗೋಪಾಲಸ್ವಾಮಿ ಸಾಕಾನೆಗಳ ಮೂಲಕ ಹುಲಿ ಸೆರೆಗೆ ಕಾರ್ಯಾಚರಣೆ ನಡೆಯುತ್ತಿದೆ.