ತಂದೆ- ತಾಯಿ ಕಳೆದುಕೊಂಡು ಆಘಾತಕ್ಕೆ ಒಳಗಾದ ಯುವಕ ಆತ್ಮಹತ್ಯೆಗೆ ಶರಣು.!
1 min readಹುಟ್ಟುಹಬ್ಬದ ದಿನವೇ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿ ನಡೆದಿದೆ. ಇಲ್ಲಿನ ಸ್ಥಳೀಯ ನಿವಾಸಿ ಎಸ್.ಕಾರ್ತಿಕ್ (30 ) ಮೃತ ದುರ್ದೈವಿಯಾಗಿದ್ದು, ಮೆಡಿಕಲ್ ರೆಪ್ರೆಂಸೆಂಟೇಟಿವ್ ಆಗಿದ್ದ ಕಾರ್ಯ ನಿರ್ವಹಿಸುತ್ತಿದ್ದ. ಆದರೆ ನಿನ್ನೆ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿ ಬಳಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
– ಚಿಕ್ಕಮ್ಮನ ಆಸರೆಯಲ್ಲಿದ್ದ ಕಾರ್ತಿಕ್ ಎನ್.ಆರ್.ಮೊಹಲ್ಲಾದಲ್ಲಿ ಬಾಡಿಗೆ ರೂಂನಲ್ಲಿ ವಾಸವಿದ್ದ. ತನ್ನ ಕೊಠಡಿಯಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಸಾಯುವ ಮುನ್ನ ಸ್ನೇಹಿತರೆ ನನ್ನಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮಿಸಿ. ಇನ್ನು ಮುಂದೆ ನಾನು ನಿಮ್ಮೊಂದಿಗೆ ಇರುವುದಿಲ್ಲ ಎಂದು ಇಂಗ್ಲಿಷ್‌ನಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.
*3ನೇ ಆತ್ಮಹತ್ಯೆ ಯತ್ನದಲ್ಲಿ ಸಾವು.*
ತಂದೆ-ತಾಯಿ ಕಳೆದುಕೊಂಡು ಆಘಾತಕ್ಕೆ ಒಳಗಾಗಿದ್ದ ಕಾರ್ತಿಕ್ ಈ ಹಿಂದೆಯೂ 2 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ತನ್ನ ತಾಯಿ ಸಾವನ್ನಪ್ಪಿದ ದಿನ ವಿಷ ಸೇವಿಸಿದ್ದ ಬಳಿಕ ತಂದೆ ಸಾವನ್ನಪ್ಪಿದ ದಿನ ರೈಲಿನಿಂದ ಕೆಳಗೆ ಜಿಗಿದಿದ್ದ. ಇದೀಗಾ ಮೂರನೇ ಬಾರಿ ಯತ್ನದಲ್ಲಿ ಕಾರ್ತಿಕ್ ಮೃತಪಟ್ಟಿದ್ದಾನೆ. ಸದ್ಯ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.