‘ಮಾಸ್ಟರ್ ಚೆಫ್’ ಶೀಘ್ರದಲ್ಲೇ ಕನ್ನಡದಲ್ಲಿ” ಕಿಚ್ಚ’ನ ದರ್ಬಾರ್ ನಲ್ಲಿ ನಡೆಯಲಿದೆ ಶೋ.!

1 min read

ಪ್ರಸಿದ್ಧ ‘ಮಾಸ್ಟರ್ ಚೆಫ್’ ಕನ್ನಡದಲ್ಲಿ ಶುರುವಾಗಲಿದ್ದು ಕನ್ನಡದಲ್ಲಿ ಚೆಫ್ ಆಗಿ ಕಾರ್ಯಕ್ರಮ ನಡೆಸಿಕೊಡಲು ಕಿಚ್ಚ ಸುದೀಪ್ ರೆಡಿಯಾಗಿದ್ದಾರೆ. ಈಗಾಗಲೇ ಬಿಗ್ ಬಾಸ್ ಶೋನಿಂದ ಅನಾರೋಗ್ಯದ ಕಾರಣ‌ ದೂರ ಉಳಿದಿರುವ ಸುದೀಪ್ ಇದೀಗಾ ಚೇತರಿಕೆ ಕಂಡಿದ್ದಾರೆ. ಆದರೆ ಈ ವರೆಗು ಹೊರಗೆ ಬಾರದ ಸುದೀಪ್ ಹೊಸದಾದ ಮಾಹಿತಿ ನೀಡಿದ್ದಾರೆ ಅದೇ ಮಾಸ್ಟರ್ ಚೆಫ್.

ಹೌದು- ವಿದೇಶದ ನಂಬರ್ ಒನ್ ಕಾರ್ಯಕ್ರಮ ಆಗಿರುವ ಮಾಸ್ಟರ್ ಚೆಫ್ ಕಾರ್ಯಕ್ರಮ ಇದೀಗಾ ಕನ್ನಡದಲ್ಲಿ ಪ್ರಾರಂಭವಾಗಲಿದೆ. ಆದರೆ ಇದಕ್ಕೆ ಇನ್ನು ದಿನಾಂಕ ನಿಗಧಿ ಆಗಿಲ್ಲ. ಕಾರಣ ಸುದೀಪ್ ಈಗಾಗಲೇ ಬಿಗ್ ಬಾಸ್ 8 ಸೀಸನ್‌ನಲ್ಲಿ ಭಾಗಿಯಾಗಿದ್ದಾರೆ. ಆದರೆ ಇಂದು ಅದು ಕರೋನಾ ಎರಡನೇ ಅಲೆಯ ಲಾಕ್‌ಡೌನ್ ‌ನಿಂದ ಅರ್ಧಕ್ಕೆ ಕೊನೆಗೊಳ್ಳುತ್ತಿದ್ದು, ಬಿಗ್ ಹೌಸ್‌ನಲ್ಲಿರುವ ಎಲ್ಲ ಸ್ಪರ್ಧಿಗಳು ವಾಪಸ್ ಹೊರಗೆ ಬರುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಇಂದಿನ ಸಂಡೇ ಕಾರ್ಯಕ್ರಮ ಮುಗಿಸಿ ಬಿಗ್ ಬಾಸ್ ಎಂಡ್ ಮಾಡಲಿದ್ದಾರೆ. ಆದರೆ ಮಾಸ್ಟರ್ ಚೆಫ್ ಕನ್ನಡದಲ್ಲಿ ಸುದೀಪ್ ಬಿಗ್ ಬಾಸ್ ಸೀಸನ್ ಮುಗಿಸಿದ ಬಳಿಕ ಬರುವುದಾಗಿ ತಿಳಿಸಿದ್ದಾರೆ. ಕಾರಣ ಎರಡು ಕಾರ್ಯಕ್ರಮದ ನಿರ್ಮಾಪಕರಿಗೆ ಸಮಸ್ಯೆ ಆಗಬಾರದೆಂಬ ನಿಟ್ಟಿನಲ್ಲಿ ಈ ಒಳ್ಳೆಯ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಈ ಮಾಸ್ಟರ್ ಚೆಫ್ ಕಾರ್ಯಕ್ರಮ ಕನ್ನಡದಲ್ಲಿ ಫೆಬ್ರವರಿ-ಮಾರ್ಚ್‌ನಲ್ಲೇ ಶುರುವಾಗಬೇಕಿತ್ತು. ಬಿಗ್ ಬಾಸ್ ಆರಂಭವಾದ ಕಾರಣ ಇದನ್ನ ಮುಂದೂಡಲಾಯಿತು.

ಇನ್ನು ಮಾತುಕತೆಯಲ್ಲಿದೆ‌ ಮಾಸ್ಟರ್ ಚೆಫ್!

– ಸದ್ಯ ಬಿಗ್ ಹೌಸ್‌ನ ಸಾರಥಿಯಾಗಿರುವ ಕಿಚ್ಚ ಸುದೀಪ ಎರಡನೇ ಲಾಕ್‌ಡೌನ್ ಮುಗಿಸಿ ಬಳಿಕ ಮಾಸ್ಟರ್ ಚೆಫ್‌ಗೆ ಸಹಿ ಮಾಡುವವರಿದ್ದಾರೆ. ವಿಶೇಷ ಅಂದ್ರೆ ಸುದೀಪ್ ಈಗಾಗಲೇ ಸಖತ್ ಆಗಿ ಕುಕ್ಕಿಂಗ್ ಮಾಡ್ತಾರೆ. ಆ ಹಿನ್ನೆಲೆಯಲ್ಲಿ ಸುದೀಪ್‌ಗಿಂತ ಸೂಪರ್ ವ್ಯಕ್ತಿ ಈ‌ ಕಾರ್ಯಕ್ರಮಕ್ಕೆ ಬೇರೊಬ್ಬರಿಲ್ಲ ಎಂದು ನಿರ್ಧರಿಸಿ ಅವರನ್ನೇ ಆಯ್ಕೆ ಮಾಡಲಾಗಿದೆ.

ಬಹುತೇಕ ‘ಮಾಸ್ಟರ್ ಕಿಚ್ಚ’ನ್” ಹೆಸರು ಫೈನಲ್ ಸಾಧ್ಯತೆ!

ವಿಶೇಷ ಅಂದ್ರೆ ಕಿಚ್ಚ‌ ಸುದೀಪ ಈಗಾಗಲೇ ಇಡೀ ಭಾರತ ಚಿತ್ರರಂಗವೇ ಗುರ್ತಿಸುವಂತ ಪ್ರತಿಭಾವಂತ ನಟ. ಹಾಗಾಗಿ ಕಿಚ್ಚ ಅಂದ್ರೆ ಅದು ಸುದೀಪ ಎಂದು ಎಲ್ಲರಿಗು ಗೊತ್ತಿರುವ ಸಂಗತಿ. ಹಾಗಾಗಿಯೇ ಮಾಸ್ಟರ್ ಚೆಫ್ ಹೆಸರನ್ನ ಕನ್ನಡದಲ್ಲಿ ಮಾಸ್ಟರ್ ಕಿಚ್ಚ’ನ್ ಎಂದು ಬದಲಿಸಿದ್ರೆ ಒಳ್ಳೆಯ ಸ್ಪಂದನೆ ಸಿಗಲಿದೆ ಎಂಬುದು ಆಯೋಜಕರ ಚಿಂತನೆ. ಹಾಗಾಗಿಯೇ ಮಾಸ್ಟರ್ ಕಿಚ್ಚ’ನ್’ ಬಹುತೇಕ ಫಿಕ್ಸ್ ಆಗಲಿದೆ‌‌‌. ಬಳಿಕ ಜುಲೈ ಅಥವಾ ಆಗಸ್ಟ್‌ಗೆ ಈ ಶೋ ಶುರು ಮಾಡಲು ಸಹ ಸಿದ್ದತೆ ನಡೆದಿದೆ ಎನ್ನಲಾಗಿದೆ.

ಸದ್ಯ ಕಿಚ್ಚ 15 ದಿನಗಳಿಂದ ರೆಸ್ಟ್ ನಲ್ಲಿದ್ದು ಅವರ ಆದೋಗ್ಯ ಸುಧಾರಿಸಿದೆ. ಕೋಟ್ಯಾಂತರ ಅಭಿಮಾನಿಗಳ ಹಾರೈಕೆ’ ಪ್ರಾರ್ಥನೆ ಎರಡು ಸಹ ಅವರನ್ನ ಅನಾರೋಗ್ಯದಿಂದ ಬೇಗ ಗುಣಮುಖರಾಗುವಂತೆ ಮಾಡಿದೆ. ಹೀಗೆ ಕಿಚ್ಚ ಸುದೀಪ ಒಳ್ಳೆಯ ಹೆಸರನ್ನ ಮಾಡಲಿ ನಮ್ಮ ದೇಶದ ಕೀರ್ತಿ ಪತಾಕೆ ಕಲಾವಿದನಾಗಿ ಮೆರೆಸಲಿ ಎಂಬುದು ನಮ್ಮ ಹಾರೈಕೆ.

About Author

Leave a Reply

Your email address will not be published. Required fields are marked *