ಮೈಸೂರು ಎಸ್ಪಿ ರಿಷ್ಯಂತ್, ಡಿಸಿಪಿ ಪ್ರಕಾಶ್ ಗೌಡ ವರ್ಗಾವಣೆ
1 min readಮೈಸೂರು: ಮೈಸೂರು ಎಸ್ಪಿ ರಿಷ್ಯಂತ್ ಹಾಗೂ ಡಿಸಿಪಿ ಪ್ರಕಾಶ್ ಗೌಡ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ದಾವಣಗೆರೆ ಎಸ್ಪಿಯಾಗಿ ರಿಷ್ಯಂತ್ ಹಾಗೂ ಬೆಂಗಳೂರು ಐಎಸ್ ಡಿ ವರಿಷ್ಠಾಧಿಕಾರಿಯಾಗಿ ಪ್ರಕಾಶ್ ಗೌಡ ಅವರನ್ನ ವರ್ಗಾವಣೆ ಮಾಡಲಾಗಿದೆ.
ಮೈಸೂರಿಗೆ ನೂತನ ಡಿಸಿಪಿಯಾಗಿ ಪ್ರದೀಪ್ ಗುಂಟಿ ನೇಮಕ ಮಾಡಲಾಗಿದ್ದು, ನೂತನ ಎಸ್ಪಿಯಾಗಿ ಆರ್.ಚೇತನ್ ಅವರನ್ನ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆರ್.ಚೇತನ್ ಅವರು ಕರಾವಳಿ ಸೆಕ್ಯುರಿಟಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. ಪ್ರದೀಪ್ ಗುಂಟಿ ಬೆಂಗಳೂರು ಐಎಸ್ ಡಿ ವರಿಷ್ಠಾಧಿಕಾರಿಯಾಗಿದ್ದರು.