ಒಬ್ಬರೇ ಕೊರೊನಾ ನಿಯಂತ್ರಣ ಮಾಡಿದ್ದಾರೆ ಅನ್ನೋ ಭ್ರಮೆ ಬೇಡ
1 min readಮೈಸೂರು: ಒಬ್ಬರೇ ಕೊರೊನಾ ನಿಯಂತ್ರಣ ಮಾಡಿದ್ದಾರೆ ಅನ್ನೋ ಭ್ರಮೆ ಬೇಡ ಅಂತ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಒಬ್ಬರೇ ಕೊರೊನಾ ನಿಯಂತ್ರಣ ಮಾಡಿದ್ದಾರೆ ಅನ್ನೋ ಭ್ರಮೆ ಬೇಡ. ಇದು ಟೀಂ ವರ್ಕ್ 11 ಕ್ಷೇತ್ರದ ಶಾಸಕರು ಕೆಲಸ ಮಾಡುತ್ತಿದ್ದಾರೆ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ವೈದ್ಯರು ಪೊಲೀಸರು ಆಶಾ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ ಎಂದರು.
ಮೈಸೂರಿನಲ್ಲಿ ಅಧಿಕಾರಿಗಳ ಸಮರ ವಿಚಾರ: ಸಂಜೆ ಮುಖ್ಯ ಕಾರ್ಯದರ್ಶಿಗಳ ಭೇಟಿ ಮಾಡುತ್ತೇನೆ. ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ನಾನು ಯಾವುದೇ ಮಾಹಿತಿ ನೀಡಿಲ್ಲ. ಸಿಎಂ ಅವರದ್ದೆ ಆದ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ.
ಸಚಿವ ಎಸ್ ಟಿ ಸೋಮಶೇಖರ್ ರಾಜೀನಾಮೆಗೆ ಕಾಂಗ್ರೆಸ್ ಒತ್ತಾಯ ವಿಚಾರ: ನನ್ನ ರಾಜೀನಾಮೆಯಿಂದ ಮೈಸೂರಿಗೆ ಒಳ್ಳೆಯದಾದರೆ ರಾಜೀನಾಮೆ ನೀಡಲು ಸಿದ್ದ. ಎರಡು ಮೂರು ದಿನದಿಂದ ನನ್ನ ಮನಸಿಗೆ ತುಂಬಾ ನೋವಾಗಿದೆ. ಈ ವಿಚಾರವನ್ನು ಸಿಎಂ ಅವರಿಗೂ ಹೇಳಿದ್ದೇನೆ. ಆದ್ದರಿಂದ ದಯಮಾಡಿ ಇದನ್ನು ಸರಿಪಡಿಸಿ ಅಂತಾ ಮನವಿ ಮಾಡಿದ್ದೇನೆ. ಸಿಎಂ ಬಗ್ಗೆ ವಿಶ್ವಾಸವಿದೆ. ಸಿ ಎಸ್ ಮೈಸೂರಿನ ಎಲ್ಲಾ ಹಂತದ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಅದರ ವರದಿಯನ್ನು ಸಿಎಂಗೆ ಸಲ್ಲಿಸುತ್ತಾರೆ. ಆ ಮಾಹಿತಿ ಆಧಾರಿಸಿ ಕ್ರಮ ಆಗಲಿದೆ ಅಂತ ಮೈಸೂರಿನಲ್ಲಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿಕೆ ನೀಡಿದ್ದಾರೆ.