ಮೊಬೈಲ್ ಕೆಟ್ಟೋಗಿ ಆನ್ಲೈನ್ ಕ್ಲಾಸ್ ಹಾಜರಾಗಲು ಸಮಸ್ಯೆ: ಮೊಬೈಲ್ ಖರೀದಿಸಲು ಸೊಪ್ಪು ಮರಾಟಕ್ಕಿಳಿದ ವಿದ್ಯಾರ್ಥಿನಿ

1 min read

ಮೈಸೂರು: ಇದು ಮೈಸೂರಿನ ವಿದ್ಯಾರ್ಥಿನಿಯೋರ್ವಳ ಕತೆ. ಬಡ ಕುಟುಂಬದಲ್ಲಿ ಹುಟ್ಟಿ ಶಿಕ್ಷಣ ಪಡೆಯಲೇಬೇಕೆಂಬ ಛಲ ಈಕೆಯಲ್ಲಿದೆ. ಡಾಕ್ಟರ್ ಆಗುವ ಕನಸು ಹೊತ್ತು ವಿದ್ಯಾರ್ಥಿನಿ ಕೊನೆಗೆ ಬಂದಿದ್ದು ತರಕಾರಿ ಮಾರಾಟ ಮಾಡಲು.

ಹೌದು. ಕೊರೊನ ಸಂಕಷ್ಟಕ್ಕೆ ಸಿಲುಕಿದ ಮೈಸೂರಿನ ಈ ಕುಟುಂಬ. ಆನ್ಲೈನ್ ವಿದ್ಯಾಭ್ಯಾಸಕ್ಕೂ ತೊಂದರೆ ಆಗುತ್ತಿದೆ. 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸಾತಗಳ್ಳಿ ವಿದ್ಯಾರ್ಥಿನಿ ಕೀರ್ತಿನಿ ಮೊಬೈಲ್ ಕೆಟ್ಟೋ ಹೋಗಿರುವ ಹಿನ್ನೆಲೆ ಆನ್ಲೈನ್ ಕ್ಲಾಸ್ ಹಾಜರಾಗಲು ಸಮಸ್ಯೆ ಆಗಿದೆ. ಕಳೆದ ನಾಲ್ಕೈದು ದಿನಗಳಿಂದ ಆನ್ಲೈನ್ ತರಗತಿಗೆ ಗೈರಾಗಿದ್ದಾಳೆ.

ಮಹತ್ವದ SSLC ಪರೀಕ್ಷೆಯ ವಸ್ತಿಲಲ್ಲಿ ಕ್ಲಾಸ್ ಅಟೆಂಡ್ ಮಾಡಲು ಪರದಾಡುತ್ತಿದ್ದಾಳೆ. ಲ್ಯಾಪ್ ಟಾಪ್ ಇಲ್ಲ, ಟ್ಯಾಬ್ ಇಲ್ಲ ಎಂದು ಸೊಪ್ಪು ಮರಾಟಕ್ಕಿಳಿದ ಈ ವಿದ್ಯಾರ್ಥಿನಿ ಬೆಳಗ್ಗೆ 6 ರಿಂದ ಮದ್ಯಾಹ್ನ 2 ಗಂಟೆಯ ವರಗೆ ಸೊಪ್ಪು ತರಕಾರಿ ಮಾರಾಟ ಮಾಡುತ್ತಿದ್ದಾಳೆ. ಬಂದ ಹಣದಲ್ಲಿ ಟ್ಯಾಬ್ ಖರೀದಿಸುವ ಚಿಂತನೆ ನಡಸಿದ್ದಾಳೆ.

ಒಂದೆಡೆ ಅನಾರೋಗ್ಯಕ್ಕೀಡಾಗಿರುವ ತಾಯಿ, ಕೂಲಿ ಕೆಲಸ ವಿಲ್ಲದ ತಂದೆ. ಸಾತಗಳ್ಳಿಯ ಬಾಡಿಗೆ ಮನೆಯಲ್ಲಿರುವ ಕೀರ್ತಿನಿ ಕುಟುಂಬ. ತರಕಾರಿ, ಸೊಪ್ಪು ಮಾರುತ್ತಲೇ ಬೀದಿಯಲ್ಲೇ ಪುಸ್ತಕ ಹಿಡಿದು ಓದುತ್ತಿರುವ ವಿದ್ಯಾರ್ಥಿನಿ. ನೆರವಾಗಬೇಕಿದೆ ಛಲವಿರುವ ವಿದ್ಯಾರ್ಥಿನಿಗೆ.

ನೆರವು ನೀಡಲು —-> 8884908716

About Author

Leave a Reply

Your email address will not be published. Required fields are marked *