ನಾನು ಇಲಿಯಾ- ಹುಲಿಯಾ- ಮನುಷ್ಯನ ಎಂದು ಜನಕ್ಕೆ ಗೊತ್ತು? ಈಶ್ವರಪ್ಪನ್ನ ಸರ್ಟಿಫಿಕೇಟ್ ಬೇಕಿಲ್ಲ- ಸಿದ್ದರಾಮಯ್ಯ.

1 min read

ಮೈಸೂರು : ಕಾಂಗ್ರೆಸ್ ವಿರುದ್ಧ ಕೆ‌.ಎಸ್ ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ವಿಚಾರವಾಗಿ ಮೈಸೂರಿನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ‌ ನೀಡಿದ್ದಾರೆ. ಈಶ್ವರಪ್ಪನಿಗೆ ಸಂಸ್ಕಾರ, ಸಂಸ್ಕೃತಿಯೇ ಗೊತ್ತಿಲ್ಲ. ಯಾರು ಬೇಕಾದರೂ ಅವ್ರು ಬಳಸಿರುವ ಪದವನ್ನು ಬಳಸಬಹುದು. ಆದರೆ ಸಂಸ್ಕಾರ ಇರುವವರು ಅಂತಹ ಪದವನ್ನು ಬಯಸುವುದಿಲ್ಲ. ಯಾಕಂದರೆ ಈಶ್ವರಪ್ಪ ಬೆಳೆದು ಬಂದಿರುವ ಹಾದಿಯೇ ಹಾಗಿದೆ. ಅವ್ರಿಂದ ಬದಲಾವಣೆಗಳನ್ನು ನಿರೀಕ್ಷೆ ಮಾಡಲೇಬಾರದು‌ ಆಡಳಿತದಲ್ಲಿರುವವರು ಟೀಕೆಗಳನ್ನ ಆರೋಗ್ಯ ಪೂರ್ಣವಾಗಿ ಸ್ವೀಕರಿಸಬೇಕು. ರಾಜಕಾರಣದಲ್ಲಿ ಟೀಕೆ ಬರುವುದು ಸಹಜ. ಅದಕ್ಕೆ ಈ ರೀತಿ ಪ್ರತಿಕ್ರಿಯೆ ನಿಡೋದು ಸರಿಯಲ್ಲ. ಈಶ್ವರಪ್ಪ ಮೊದಲಿನಿಂದಲೂ ಹೀಗೆಯೇ ಮಾತ್ನಾಡುತ್ತಿದ್ದಾರೆ. ಅವರಿಗೆ ಆರೋಗ್ಯಕರವಾದ ಸಂಸ್ಕೃತಿಯೇ ಇಲ್ಲ. ಬಿಜೆಪಿಯವರ ಸಂಸ್ಕೃತಿಯೇ ಇಂತದ್ದು. ಈಶ್ವರಪ್ಪರಿಗೆ ಬಿಜೆಪಿ ಬುದ್ದಿ ಹೇಳುವ ಕೆಲಸ ಮಾಡುತ್ತಿಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಸಿದ್ದರಾಮಯ್ಯ ಇಲಿ ಎಂಬ ಈಶ್ವರಪ್ಪ ಹೇಳಿಕೆಗು ಟಾಂಗ್ ನೀಡಿದ್ದು, ನಾನು ಇಲಿಯಾ, ಹುಲಿಯಾ, ಮನ್ನುಷ್ಯನ ಎಂದು ತೀರ್ಮಾನ ಮಾಡಬೇಕಾದವರು ಜನ. ಇದಕ್ಕೆ ಈಶ್ವರಪ್ಪನ್ನ ಸರ್ಟಿಫಿಕೇಟ್ ಬೇಕಾ? ಇದಕ್ಕೆ‌ ಜನರು ಉತ್ತರ ಕೊಡ್ತಾರೆ, ಈಶ್ವರಪ್ಪ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

About Author

Leave a Reply

Your email address will not be published. Required fields are marked *