ಚಾಮರಾಜನಗರ ದುರಂತ: ಆಸ್ಪತ್ರೆಯ ಅಧಿಕಾರಿಗೆ ಚಳಿ ಬಿಡಿಸಿದ ಸಿದ್ದರಾಮಯ್ಯ..!
1 min readಚಾಮರಾಜನಗರ: ಆಕ್ಸಿಜನ್ ಕೊರತೆಯಿಂದ ಚಾಮರಾಜನಗರ ಜಿಲ್ಲಾ ಆಸ್ಪತ್ರೆಯಲ್ಲಿ 24 ಮಂದಿ ಸಾವಿಗೀಡಾಗಿರುವ ಘಟನೆಗೆ ಸಂಬಂಧಿಸಿದಂತೆ ಇಂದು ಚಾಮರಾಜನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೇಸ್ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಭೇಟಿ ನೀಡಿದರು.
ಈ ವೇಳೆ ವೈದ್ಯರ ಬಳಿ ಮಾಹಿತಿ ಕಲೆ ಹಾಕಿದ ಸಿದ್ದರಾಮಯ್ಯ ಆಸ್ಪತ್ರೆಯ ಅಧಿಕಾರಿಗೆ ಚಳಿ ಬಿಡಿಸಿದ ಸಿದ್ದರಾಮಯ್ಯ. I am Not A Dancer’ Tell Me the Truth. ಸರಿಯಾಗಿ ಮಾಹಿತಿ ನೀಡಿ’ ಸತ್ಯವಾದ ಸಂಗತಿ ತಿಳಿಸಿ. 50 ಆಕ್ಸಿಜನ್ ಬೆಡ್ ಇದೆ ಎಂದ ಅಧಿಕಾರಿಗೆ ಸಿದ್ದು ಆರೋಗ್ಯ ಪಾಠ ಮಾಡಿದ್ದು, ಸರಿಯಾಗಿ ಹೇಳಬೇಕು’ ವೆಂಟಿಲೇಟರ್ ಎಷ್ಠಿದೆ.? 33 ಮಾತ್ರ ಇರೋದು ತಾನೇ ಅದನ್ನ ಸತ್ಯವನ್ನ ಹೇಳಬೇಕು. ನಾನು ಕೇಳುತ್ತಿದ್ದೇನೆ’ ನಾನು ಡ್ಯಾನ್ಸರ್ ಅಲ್ಲ. ಸರಿಯಾದ ಮಾಹಿತಿ ಕೊಡಿ ಎಂದು ಅಧಿಕಾರಿಗೆ ಸಿದ್ದರಾಮಯ್ಯ ಚಳಿ ಬಿಡಿಸಿದರು. ಸಿದ್ದರಾಮಯ್ಯರ ಮಾತಿನ ವೇಳೆ ಅಧಿಕಾರಿಗಳು ಗಪ್ ಚುಪ್ ಆದರು.
ಇನ್ನು ಸಿದ್ದು ಡಿಕೆಶಿಗೆ ಸ್ಥಳೀಯ ಶಾಸಕರಾದ ಪುಟ್ಟರಂಗಶೆಟ್ಟಿ, ನರೇಂದ್ರ ಸಾಥ್ ನೀಡಿದರು. ಅಲ್ಲದೆ ಮಾಜಿ ಸಂಸದ ಧ್ರುವನಾರಾಯಣ್ ಕೂಡ ಉಪಸ್ಥಿತರಿದ್ದರು.