ಇಂದಿನಿಂದಲೇ ದುರಂತದ ತನಿಖೆ: ಚಾಮರಾಜನಗರ ಜಿಲ್ಲಾಸ್ಪತ್ರೆಗಿಂದು ಶಿವಯೋಗಿ ಕಳಸದ್ ಭೇಟಿ
1 min read
ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿನ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಯಾಗಿರುವ KSRTC ಎಂಡಿ ಶಿವಯೋಗಿ ಕಳಸದ್ ಇಂದಿನಿಂದಲೇ ತನಿಖೆ ನಡೆಸಲಿದ್ದಾರೆ.
ಆಕ್ಸಿಜನ್ ದುರಂತಕ್ಕೆ ನೈಜ ಕಾರಣವೇನು, ಎಷ್ಟು ಮಂದಿ ಸೋಂಕಿತರು ಆಮ್ಲಜನಕ ಕೊರತೆಯಿಂದ ಅಸುನೀಗಿದ್ದಾರೆ, ಈ ಅವಘಡಕ್ಕೆ ಹೊಣೆ ಯಾರು ಹೊರಬೇಕು, ಆಸ್ಪತ್ರೆ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ಸಿಬ್ಬಂದಿ ವೈಫಲ್ಯದ ಕುರಿತು ತನಿಖೆ ನಡೆಸುವ ಸಾಧ್ಯತೆ ಇದೆ.

ಆದರೆ, ಆಮ್ಲಜನಕ ಕೊರತೆಯಿಂದ ಮೂವರು ಮೃತಪಟ್ಟಿದ್ದಾರೆ, 24 ಮಂದಿಯಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ತಿಳಿಸಿರುವುದರಿಂದ ತನಿಖೆಯಿಂದ ಹೆಚ್ಚೇನೆನ್ನೂ ನಿರೀಕ್ಷಸಲಾಗಲ್ಲ, ಘಟನೆಗೆ ಯಾರೂ ಹೊಣೆಯಾಗದೇ ತಿಪ್ಪೆ ಸಾರಿಸುವ ಕೆಲಸ ಮಾಡಲಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿದೆ.