ಮೈಸೂರು ಜಿಲ್ಲೆಯ ನಾಗರಹೊಳೆ ಅರಣ್ಯದಲ್ಲಿ ಎರಡನೇ ಹಂತದ ಹುಲಿ ಗಣತಿ ಆರಂಭ

1 min read

ಮೈಸೂರು: ಜಿಲ್ಲೆಯ ನಾಗರಹೊಳೆ ಅರಣ್ಯದ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ವಾರ್ಷಿಕ ಹುಲಿ ಗಣತಿ ಮೊದಲ ಹಂತ ಅಂತ್ಯವಾಗಿ ಎರಡನೇ ಹಂತ ಇಲಾಖೆ ನಡೆಸುತ್ತಿದ್ದಾರೆ.

840 ಚದರಕಿ.ಮಿ ವ್ಯಾಪ್ತಿಯ ನಾಗರ ಹೊಳೆ ಅರಣ್ಯದಲ್ಲಿ ಎರಡು ಹಂತದಲ್ಲಿ ಹುಲಿಗಣತಿ ನಡೆದಿದ್ದು ಪ್ರಥಮ ಹಂತದ ಗಣತಿ ಮೇ ಆರಂಭ ವಾಗಿ ಮುಕ್ತಾಯಗೊಂಡಿದೆ. ಎರಡನೇ ಹಂತದ ಗಣತಿ ಜೂನ್ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಲಾಗಿದೆ

ನಾಗರಹೊಳೆ ರಾಷ್ಟ್ರೀಯ ಉದ್ಯಾನದ 8 ವಲಯವನ್ನು ಎರಡು ಬ್ಲಾಕ್‌ಗಳಾಗಿ ವಿಂಗಡಿಸಿ , ಬ್ಲಾಕ್ ಒಂದರಲ್ಲಿ ಹುಣಸೂರು , ಆನೆಚೌಕೂರು , ವೀರನಹೊಸಹಳ್ಳಿ , ಮೇಟಿಕುಪ್ಪೆ ವಲಯಗಳಿದ್ದು , ಬ್ಲಾಕ್ ಎರಡರಲ್ಲಿ ನಾಗರಹೊಳೆ , ಕಲ್ಲಹಳ್ಳ , ಡಿ.ಬಿ.ಕುಪ್ಪೆ, ಅಂತರಸಂತೆ ವಲಯವಿದೆ. ಬ್ಲಾಕ್ ಎರಡರಲ್ಲಿ ಏಪ್ರಿಲ್ ಅಂತ್ಯ ದಲ್ಲಿ ಗಣತಿ ನಿಯಮಾನುಸಾರದಂತೆ 8 ದಿನಗಳ ಗಣತಿ ಕಾರ್ಯ ‘ ಫೇಸ್‌ಫೋರ್ ಮಾನಿಟರಿಂಗ್’ನಲ್ಲಿ ಆರಂಭವಾಗಿದೆ.

https://www.facebook.com/NannuruMysuru/videos/901224590435245

ಗಣತಿ ಕಾರ್ಯದಲ್ಲಿ 450 ಸ್ವಯಂ ಚಾಲಿತ ಕ್ಯಾಮೆರಾ ಬಳಸಿ ಒಂದು ತಿಂಗಳ ಗಣತಿ ನಡೆಯಲಿದ್ದು , ಕ್ಯಾಮೆರಾ ಡೇಟಾ ಆಧರಿಸಿ ಗಣತಿ ತಜ್ಞರು ಸ್ಟಾಟಿಸ್ಟಿಕಲ್ ನಿಯಮಾನುಸಾರ ಹುಲಿ ವಯಸ್ಸು ಲಿಂಗ ಪತ್ತೆ ಮಾಡಲಿದ್ದಾರೆ .

ರಾಷ್ಟ್ರೀಯ ಸಮೀಕ್ಷೆ : ನಾಲ್ಕು ವರ್ಷಕ್ಕೆ ರಾಷ್ಟ್ರೀಯ ಯೋಜನಾ ನಿಯಮಾನುಸಾರ ನಡೆಯಲಿರುವ ಗಣತಿ ಕಾರ್ಯಕ್ಕೆ ವಾರ್ಷಿಕ ಗಣತಿ ಸಮೀಕ್ಷೆ ವರದಿ ಪೂರಕವಾಗಲಿದೆ . 2021 ರಲ್ಲಿ ನಡೆದಿರುವ ಗಣತಿ ರಾಷ್ಟ್ರೀಯ ಮಟ್ಟದಲ್ಲಿ 2022 ರಲ್ಲಿ ನಡೆಯಲಿರುವ 5 ನೇ ರಾಷ್ಟ್ರೀಯ ಹುಲಿ ಗಣತಿ ಯೋಜನೆಗೆ ಪೂರಕವಾಗಲಿದೆ.

ಕೋವಿಡ್ ಸಂದರ್ಭದಲ್ಲಿ ಹುಲಿ ಗಣತಿ ಕಾರ್ಯಕ್ಕೆ ಸ್ವಯಂ ಸೇವಕರ ನೆರವು ಪಡೆದು ಅರಣ್ಯದಲ್ಲಿ ಗಣತಿ ನಡೆಸುವ ವಾಡಿಕೆ ಇತ್ತು ಕೋವಿನಿಂದಾಗಿ ಸ್ವಯಂ ಸೇವಾ ಸಂಘದ ಸಹಾಯವಿಲ್ಲದೆ ಅರಣ್ಯ ಇಲಾಖೆಗೆ ಸ್ಸೇರಿದ 130 ಸಿಬ್ಬಂದಿ ಹುಲಿ ಗಣತಿ ಕಾರ್ಯದಲ್ಲಿ ತೊಡಗಿದ್ದಾರೆ.

ಹುಲಿ- ಬಲಿಪ್ರಾಣಿಗಳ ಲೆಕ್ಕಾಚಾರ 2020 ರಲ್ಲಿ ನಡೆದ ಗಣತಿ ಅನ್ವಯ ನಾಗರಹೊಳೆ ಅರಣ್ಯದಲ್ಲಿ ಪ್ರತಿ 100 ಚದರ ಕಿ.ಮಿ.ಗೆ 12 ಹುಲಿಗಳು ವಾಸಿಸುತ್ತಿದೆ . ನಾಗರಹೊಳೆ ಅರಣ್ಯದಲ್ಲಿ 125 ಹುಲಿ ವಾಸವಿದ್ದು , ಹುಲಿ ಅಭಿವೃದ್ಧಿಗೆ ಪೂರಕವಾದ ಅರಣ್ಯ ಮತ್ತು ಆಹಾರ ಸರಪಳಿ ಉತ್ತಮವಾಗಿದ್ದು , ಪ್ರತಿ ಚದರ ಕಿ.ಮಿ.ಗೆ ಚುಕ್ಕಿ ಚಿಂಕೆ 24 , ಸಾಂಬಾರ 5 , ಕಾಡುಕುರಿ 2 , ಕಡವೆ 5 ಕಾಡುಹಂದಿ 4 ವಾಸವಿದೆ .

840 ಚದರಕಿ.ಮಿ.ವ್ಯಾಪ್ತಿಯ ನಾಗರ ಹೊಳೆ ಅರಣ್ಯದಲ್ಲಿ ಎರಡು ಹಂತದಲ್ಲಿ ಹುಲಿಗಣತಿ ನಡೆದಿದ್ದು ಪ್ರಥಮ ಹಂತದ ಗಣತಿ ಮೇ ಆರಂಭ ವಾಗಿ ಮುಕ್ತಾಯಗೊಂಡಿದೆ. ಎರಡನೇ ಹಂತದ ಗಣತಿ ಜೂನ್ ಮೊದಲ ವಾರದಲ್ಲಿ ಕಾರ್ಯಾರಂಭ ಮಾಡಲಿದೆ. ಕೋವಿಡ್ ಸಂದರ್ಭದಲ್ಲಿ ಹುಲಿ ಗಣತಿ ಕಾರ್ಯಕ್ಕೆ ಸ್ವಯಂ ಸೇವಕರ ನೆರವು ಪಡೆದು ಅರಣ್ಯದಲ್ಲಿ ಗಣತಿ ನಡೆಸುವ ವಾಡಿಕೆ ಇತ್ತು ಕೋವಿನಿಂದಾಗಿ ಸ್ವಯಂ ಸೇವಾ ಸಂಘದ ಸಹಾಯವಿಲ್ಲದೆ ಅರಣ್ಯ ಇಲಾಖೆಗೆ ಸಿಬ್ಬಂದಿ ಹುಲಿ ಗಣತಿ ಕಾರ್ಯದಲ್ಲಿ ತೊಡಗಿಸಲಾಗಿದೆ.

2018 ರ ಅಲ್ ಇಂಡಿಯಾ ಟೈಗರ್ ಸಮೀಕ್ಷೆ ಪ್ರಕಾರ ನಾಗರಹೊಳೆ ಅರಣ್ಯದಲ್ಲಿ 125 ಹುಲಿ ವಾಸವಿದ್ದು, ನಾಗರಹೊಳೆ ಅರಣ್ಯದಲ್ಲಿ ಪ್ರತಿ 100 ಚದರ ಕಿ.ಮಿ.ಗೆ 12 ಹುಲಿಗಳು ವಾಸಿಸುತ್ತಿದೆ ದೇಶದಲ್ಲೇ 3 ನೇ ಸ್ಥಾನ ಪಡೆದುಕೊಂಡಿದೆ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದೇವೆ. ಹತ್ತು ವರ್ಷಗಳ ಸಮೀಕ್ಷೆ ಪ್ರಕಾರ ಹುಲಿಗಳ ಬೆಳವಣಿಗೆ ಶೇಕಡ 50 % ರಷ್ಟು ಹೆಚ್ಚಾಗಿದೆ ಸಸ್ಯಾಹಾರಿ ಪ್ರಾಣಿಗಳು ಹೆಚ್ಚು ಇದ್ದಷ್ಟು ಹುಲಿಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದರು.

– ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರಾದ ಮಹೇಶ್ ಕುಮಾರ್.

ನಾಗರಹೊಳೆ ರಾಷ್ಟ್ರೀಯ ಉದ್ಯಾನದ 8 ವಲಯವನ್ನು ಎರಡು ಬ್ಲಾಕ್‌ಗಳಾಗಿ ವಿಂಗಡಿಸಿ , ಬ್ಲಾಕ್ ಒಂದರಲ್ಲಿ ಹುಣಸೂರು , ಆನೆಚೌಕೂರು , ವೀರನಹೊಸಹಳ್ಳಿ , ಮೇಟಿಕುಪ್ಪೆ ವಲಯಗಳಿದ್ದು , ಬ್ಲಾಕ್ ಎರಡರಲ್ಲಿ ನಾಗರಹೊಳೆ , ಕಲ್ಲಹಳ್ಳ , ಡಿ.ಬಿ.ಕುಪ್ಪೆ , ಅಂತರಸಂತೆ ವಲಯವಿದೆ ಕ್ಯಾಮೆರಾ ಮೂಲಕ ಹುಲಿ ಗಣತಿ ಮಾಡಲಾಗುವುದು ಈ ಎಲ್ಲ ಹುಲಿಯ ಮಾಹಿತಿಯನ್ನು ದೆಹಲಿಗೆ ಕಳಿಸಲಾಗುವುದು ಎಂದರು.

– ಸಿದ್ದರಾಜು ನಾಗರಹೊಳೆ ಅಂತರಸಂತೆ ವನ್ಯಜೀವಿ ವಲಯ ಅರಣ್ಯಾಧಿಕಾರಿ.

About Author

Leave a Reply

Your email address will not be published. Required fields are marked *