ಮೈಸೂರಿನಲ್ಲಿ ಶಾಲಾ ಕಾಲೇಜು ಓಪನ್- ಒಂದೂವರೆ ವರ್ಷದ ಬಳಿಕ ಕ್ಲಾಸ್‌ಗೆ ಬಂದ ವಿದ್ಯಾರ್ಥಿಗಳು
1 min readಮೈಸೂರು : ಇಂದಿನಿಂದ ಶಾಲಾ ಕಾಲೇಜುಗಳು ಪುನಾರಂಭವಾಗಿದ್ದು, ಕೋವಿಡ್ ಆತಂಕದಿಂದ ಕಳೆದ ಒಂದೂವರೆ ವರ್ಷದಿಂದ ಬಂದ್ ಆಗಿದ್ದ ಶಾಲೆಗಳು ಇಂದು ಓಪನ್ ಆಗಿವೆ. ಮೈಸೂರು ಜಿಲ್ಲೆಯಾದ್ಯಂತ ಇಂದಿನಿಂದ ತರಗತಿಗಳು ಆರಂಭವಾಗಿದ್ದು 9, 10 ನೇ ತರಗತಿ, ಪ್ರಥಮ, ದ್ವಿತೀಯ ಪಿಯು ತರಗತಿಗಳು ಆರಂಭವಾಗಿದೆ. ಅದರಲ್ಲು ಮೈಸೂರು ಜಿಲ್ಲೆಯಲ್ಲಿ 766 ಶಾಲೆಗಳು, 257 ಕಾಲೇಜುಗಳು ಓಪನ್ ಆಗಿದ್ದು, ವಿದ್ಯಾರ್ಥಿಗಳ ಆಗಮನಕ್ಕಾಗಿ ಸಕಲ ರೀತಿಯಲ್ಲೂ ಸಿದ್ದಗೊಂಡು ತರಗತಿ ಆರಂಭವಾಗಿದೆ. ಕೋವಿಡ್ ಮುಂಜಾಗ್ರತಾ ಕ್ರಮ ಪಾಲಿಸಿ ಶಾಲೆಗಳು ಓಪನ್ ಮಾಡಿದ್ದು, ಈಗಾಗಲೇ ಶಾಲಾ ಕಾಲೇಜುಗಳಲ್ಲಿ ಸಿಬ್ಬಂದಿಗಳು ಸ್ಯಾನಿಟೈಸ್ ಮಾಡಿದ್ದಾರೆ. ಇನ್ನು ಪೋಷಕರ ಒಪ್ಪಿಗೆಯೊಂದಿಗೆ ವಿದ್ಯಾರ್ಥಿಗಳು ಆಗಮಿಸಿದ್ದು, ಆತಂಕವಿಲ್ಲದೆ ಶಾಲಾ ಕಾಲೇಜುಗಳಿಗೆ ಆಗಮಿಸುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಅಭಯ ನೀಡಿದೆ.
ಅಲ್ಲದೆ ಮೈಸೂರಿನ ಸದ್ವಿದ್ಯಾ ಕಾಲೇಜಿನಲ್ಕಿ ತರಗತಿ ಪ್ರಾರಂಭವಾಗಿದ್ದು, ಒಂದು ಡೆಸ್ಕ್‌ಗೆ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಈಗಾಗಲೇ ಪಾಠ ಪ್ರವಚನ ಶುರು ಮಾಡಿರುವ ಶಿಕ್ಷಕರು ಒಂದೂವರೆ ವರ್ಷದ ಆನ್‌ಲೈನ್ ಕ್ಲಾಸ್‌ಗೆ ಮುಕ್ತಿ ನೀಡಿದ್ದಾರೆ. ಕೇವಲ ದ್ವೀತಿಯ ಪಿಯುಸಿ ತರಗತಿಗಳು ಮಾತ್ರ ಇದೀಗಾ ಪ್ರಾರಂಭವಾಗಿದ್ದು, ಪ್ರಥಮ ವರ್ಷದ ಪಿಯುಸಿ ಇನ್ನು ದಾಖಲಾತಿ ಆಗದ ಕಾರಣ, ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ತರಗತಿ ಪ್ರಾರಂಭವಾಗಿದೆ. ಸದ್ಯ ಎರಡು ತರಗತಿ ಮುಗಿಯುತ್ತಿದ್ದಂತೆ ಕ್ಲಾಸ್ ರೂಂಗೆ ಸ್ಯಾನಿಟೈಸ್ ಮಾಡಿಸಿ ಎಲ್ಲ ರೀತಿಯ ಸಿದ್ದತೆ ಆಗಿವೆ.