ಬೆಟ್ಟದ ಹೂ ಸಿನಿಮಾ ಖ್ಯಾತಿಯ ಹಿರಿಯ ನಟ ಶಂಖನಾದ ಅರವಿಂದ್ ಕೊರೋನಾಗೆ ಬಲಿ
1 min readಸಿನಿಮಾ: ಬೆಟ್ಟದ ಹೂ ಸಿನಿಮಾ ಖ್ಯಾತಿಯ ಕನ್ನಡದ ಹಿರಿಯ ನಟ ಶಂಖನಾದ ಅರವಿಂದ್ ಅವರು ಸಾವನ್ನಪ್ಪಿದ್ದಾರೆ.
ಅರವಿಂದ್ ಅವರಿಗೆ ಕೊರೋನಾ ಸೋಂಕು ತಗುಲಿತ್ತು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಕಳೆದ 10 ದಿನಗಳ ಹಿಂದೆ ವಿಕ್ಟೋರಿಯ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಮಧ್ಯಾಹ್ನ ಸಾವನ್ನಪ್ಪಿದ್ದಾರೆ.
ಶಂಕನಾದ ಅರವಿಂದ್ ಅವರು ಕಾಶೀನಾಥ್ಗೆ ಆಪ್ತರಾಗಿದ್ದರು. 250ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಶಂಕನಾದ ಅರವಿಂದ್, ಹೆಚ್ಚಾಗಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.