ಸಾರಾ ಚೌಲ್ಟ್ರಿ ರಾಜಕಾಲುವೆ ಮೇಲಿರುವ ಆರೋಪ: ಕಂದಾಯ ಇಲಾಖೆಯಿಂದ ಸರ್ವೇ ಕಾರ್ಯ

1 min read

ಮೈಸೂರು: ಸಾರಾ ಮಹೇಶ್ ಚೌಲ್ಟ್ರಿ ರಾಜಕಾಲುವೆ ಮೇಲಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಇಂದು ಕಂದಾಯ ಇಲಾಖೆ ಸರ್ವೇ ಕಾರ್ಯ ನಡೆಸಿದೆ.

ತಹಸೀಲ್ದಾರ್ ಹಾಗೂ ಎಸಿ ನೇತೃತ್ವದ ತಂಡದಿಂದ ಸಾರಾ ಭವನದ ಅಕ್ಕಪಕ್ಕ ಹಾಗೂ ಸಂಪೂರ್ಣ ಸರ್ವೇ ಕಾರ್ಯ ನಡೆದಿದೆ. ನಿನ್ನೆಯಷ್ಟೇ ಈ ಬಗ್ಗೆ ತಂಡ ರಚನೆಯಾಗಿದೆ ಎಂದಿದ್ದ ಆರ್‌ಸಿ ಪ್ರಕಾಶ್. ಇಂದು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಎಸಿ ವೆಂಕಟರಾಜು ಸರ್ವೇ ವೀಕ್ಷಿಸಿದ್ದಾರೆ.

ಈ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ವೆಂಕಟರಾಜು ಅವರು ಪ್ರಾದೇಶಿಕ ಆಯುಕ್ತರು ಸೂಚನೆಯಂತೆ ಸರ್ವೇ ಕಾರ್ಯ ನಡೆಯುತ್ತಿದೆ. ಸಾರಾ ಭವನ ರಾಜಕಾಲುವೆ ಮೇಲೆ ಕಟ್ಟಲಾಗಿದೆ‌ ಎಂಬ ಆರೋಪ ಮಾಡಲಾಗಿದೆ. ಈ ಅಂಶದ ಮೇಲೆ ಸರ್ವೇ ಕಾರ್ಯ ನಡೆಯುತ್ತಿದೆ. ಇದೇ ಅಂಶವನ್ನ ಇಟ್ಟುಕೊಂಡು ಸರ್ವೇ ಮಾಡುತ್ತೇದ್ದೇವೆ. ಸರ್ವೇ ನಂಬರ್ 130/3 ಸೇರಿದಂತೆ ಅಕ್ಕಪಕ್ಕದ ಸರ್ವೇ ನಂಬರ್‌ನಲ್ಲಿ ಸರ್ವೇ ಕಾರ್ಯ ನಡೆಸುತ್ತಿದ್ದೇವೆ. ಈ ಎಲ್ಲ ಸರ್ವೇ ಆದ ನಂತರ ಪ್ರಾದೇಶಿಕ ಆಯುಕ್ತರಿಗೆ ವರದಿ ಕೊಡ್ತೇವೆ ಅಂತ ಹೇಳಿಕೆ ನೀಡಿದ್ದಾರೆ.

About Author

Leave a Reply

Your email address will not be published. Required fields are marked *