ಅಂಬಿಯ ನೆಚ್ಚಿನ ಕನ್ವರ್ ಶ್ವಾನ ಸಾವು
1 min readಸಿನಿಮಾ: ಸ್ಯಾಂಡಲ್‌ವುಡ್‌ನ ಜಲೀಲ ನಮ್ಮನ್ನಗಲಿ ಇಂದಿಗೆ ಎರಡೂವರೆ ವರ್ಷವೇ ಕಳೆದಿದೆ. ಆದ್ರೆ ಅಂಬಿ ಪ್ರೀತಿಯಿಂದ ಸಾಕಿದ್ದ ಶ್ವಾನಗಳು, ಅಂಬಿ ಮೃತಪಟ್ಟಿದಾಗಿನಿಂದ ಎರಡು ಶ್ವಾನಗಳು ಮಂಕಾಗಿದ್ದವು. ಆದರೆ ಇದೀಗಾ ಅಂಬಿಯ ನೆಚ್ಚಿನ ಕನ್ವರ್ ಹೆಸರಿನ ಶ್ವಾನ ಮೃತಪಟ್ಟಿದ್ದು ಮನೆಯಲ್ಲಿ ನಿರಾವ ಮೌನ ಆವರಿಸಿದೆ.
ಅಂಬಿಗೆ ಅಚ್ಚುಮೆಚ್ಚಿನ ಡೈಲಾಗ್ ಆಗಿರುವ ಬುಲ್ ಬುಲ್ ಮತ್ತು ಕನ್ವರ್ ಲಾಲ್ ಹೆಸರನ್ನೇ ಈ ಶ್ವಾನಗಳಿಗೆ ಇಡಲಾಗಿತ್ತು. ಅದರಲ್ಲು ಕನ್ವರ್ ಶ್ವಾನವಂತು ಅಂಬಿ ಹಾಗೂ ಅಭಿ ಇಬ್ಬರಿಗು ಅಚ್ಚುಮೆಚ್ಚು. ಆದರೆ ಅಂಬರೀಶ್ ಅವರ ಅಗಲಿಕೆಯಿಂದ ಮಂಕಾಗಿದ್ದ ಕನ್ವರ್ ಸೋಮವಾರ ಕೊನೆಯುಸಿರೆಳೆದಿದೆ. ಇದರಿಂದ ಅಂಬಿ ಮನೆಯಲ್ಲಿ ದುಖದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೆ ಕನ್ವರ್ ಸಾವಿನ ಸುದ್ದಿಯನ್ನು ಖುದ್ದು ಅಭಿಷೇಕ ಅಂಬರೀಶ್ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದು ಕನ್ವರ್ ಸಾವಿಗೆ ಕಂಬನಿ ಮಿಡಿದಿದ್ದಾರೆ.