ಕೊರೋನಾ ಮಾಹಾಮಾರಿಗೆ TV ಕ್ಯಾಮೆರಾಮನ್ ಬಲಿ
1 min readಚಿತ್ರದುರ್ಗ: ಚಿತ್ರದುರ್ಗದ ಪಬ್ಲಿಕ್ TV ಕ್ಯಾಮೆರಾಮನ್ ಆಗಿ ಕಳೆದ ಹಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ್ ಕೋಟಿ (35 ) ಅವರು ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.
ಬಸವರಾಜ್ ಕೋಟಿ ಕಳೆದ 20 ಕ್ಕೂ ಹೆಚ್ಚು ದಿನಗಳಿಂದ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 7-30 ರ ಸುಮಾರಿಗೆ ನಿಧನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ಪಬ್ಲಿಕ್ TV ಕ್ಯಾಮೆರಾ ಮೇನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜ್ ಕೋಟಿ ಸೌಮ್ಯ ಸ್ವಾಭಾವದವರು ಸದಾ ಸೌಜನ್ಯವಾಗಿ ನಡೆದುಕೊಳ್ಳುವ ವ್ಯಕ್ತಿತ್ವ ರೂಪಿಸಿಕೊಂಡಿದ್ದ ಅವರು ಕಳೆದ ಬಾರಿಯ ಕೊರೋನಾ ಸಂದರ್ಭದಲ್ಲೂ ಕೊರೋನಾ ಸೋಂಕಿತರಾಗಿ ಚೇತರಿಸಿಕೊಂಡಿದ್ದರು.
ಕರ್ತವ್ಯದಲ್ಲಿ ನಿಷ್ಠೆ ಹೊಂದಿದ್ದ ಕೋಟಿ ಎಲ್ಲರೊಂದಿಗೂ ಸ್ನೇಹಪರವಾಗಿ ನಡೆದುಕೊಳ್ಳುವಂತಹ ಪರಿಪಾಠ ಬೆಳೆಸಿಕೊಂಡವರು ಅವರ ವೃತ್ತಿ ನಿಷ್ಠೆಯೇ ಕೊರೋನಾ ಬಲಿಪಡೆಯಿತೇ ಎಂಬ ನೋವು ಕಾಡುತ್ತಿದೆ.
ಹಲವಾರು ವರ್ಷಗಳಿಂದಲೂ ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜ್ ಕೋಟಿ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದು ಅಪಾರ ಬಂದು ಬಳಗವನ್ನು ತೊರೆದಿದ್ದಾರೆ. ಬಸವರಾಜ್ ಕೋಟಿ ನಿಧನದ ಸಂಕಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ದಯಾ ಪಾಲಿಸಲಿ ಎಂದು ಪ್ರಾರ್ಥಿಸುತ್ತೆವೆ.