ಬೇಬಿ ಬೆಟ್ಟದ ವಿವಾದಕ್ಕೆ ಪ್ರಮೋದಾ ದೇವಿ ಒಡೆಯರ್ ಎಂಟ್ರಿ!
1 min readಮಂಡ್ಯದ ಬೆಬಿ ಬೆಟ್ಟದ ವಿವಾದಕ್ಕೆ ಪ್ರಮೋದಾ ದೇವಿ ಒಡೆಯರ್ ಅವರ ಆಗಮನವಾಗಿದ್ದು, ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ವಿಚಾರವಾಗಿ ಮಂಡ್ಯ ಡಿಸಿಗೆ ಆಕ್ಷೇಪ ಪತ್ರ ಕಳುಸಿದ್ದಾರೆ. ಹೌದು ಪ್ರಮೋದಾ ದೇವಿ ಒಡೆಯರ್ ಪರ ವಕೀಲ, ನರೇಂದ್ರ.ಡಿ.ವಿ.ಗೌಡ ಮೂಲಕ ಡಿಸಿಗೆ ಆಕ್ಷೇಪ ಪತ್ರ ಕಳುಹಿಸಲಾಗಿದೆ. ಅಲ್ಲದೆ ಜುಲೈ.22ರಂದು ಮೇಲ್ ಮೂಲಕವೂ ಆಕ್ಷೇಪಣೆ ಮಾಡಿದ್ದು, ಇದೀಗಾ ಖುದ್ದು ಡಿಸಿ ಆಪ್ತ ಶಾಖೆಗೆ ವಕೀಲರ ಮೂಲಕ ಪತ್ರ ರವಾನಿಸಿದ್ದಾರೆ.
ಬೇಬಿ ಬೆಟ್ಟ ಸರ್ವೇ ನಂಬರ್ 1 ಅಮೃತ್ ಮಹಲ್ ಒಟ್ಟು 1,623 ಎಕರೆ ಜಮೀನು ರಾಜಮನೆತನಕ್ಕೆ ಸೇರಿದ್ದಾಗಿದೆ. 1950ರ ಗೆಜೆಟ್ ನೋಟಿಫಿಕೇಷನ್ ಪ್ರಕಾರ ಅದು ನಮ್ಮ ಖಾಸಗಿ ಆಸ್ತಿ. ನಮ್ಮ ಅನುಮತಿ ಪಡೆಯದೆ ಟ್ರಯಲ್ ಬ್ಲಾಸ್ಟ್ ಮಾಡೋದು ಕಾನೂನು ಬಾಹಿರವಾಗಿದೆ. ಅಲ್ಲದೇ ನಮ್ಮ ಒಪ್ಪಿಗೆ ಪಡೆಯದೆ ಅನುಮತಿ ಕೊಟ್ಟಿರೋದಕ್ಕೆ ಆಕ್ಷೇಪ ಇದೆ ಎಂದಿದ್ದಾರೆ. ಕೂಡಲೇ ಈ ಅನುಮತಿ ಆದೇಶ ಹಿಂಪಡೆಯಬೇಕು. ತಪ್ಪಿದಲ್ಲಿ ಕಾನೂನಿನ ಮೂಲಕ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.