ಪೊಲೀಸ್ ಜೀಪ್ ಮೇಲೆ ಟಿಪ್ಪರ್ ಲಾರಿ ಪಲ್ಟಿ: ಸ್ಥಳದಲ್ಲೇ ಪೇದೆ ಸಾವು
1 min readಮೈಸೂರು: ಹೈವೇ ಪ್ಯಾಟ್ರೋಲ್ ಇಂಟರ್ ಸೆಪ್ಟರ್ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಇಂಟರ್ ಸೆಪ್ಟರ್ ವಾಹನ ಚಾಲಕ ಸಿದ್ದರಾಜನಾಯಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ನಂಜನಗೂಡು ಗುಂಡ್ಲುಪೇಟೆ ರಸ್ತೆಯಲ್ಲಿ ಕರ್ತವ್ಯ ಮುಗಿಸಿ ಬರುತ್ತಿದ್ದ ನಂಜನಗೂಡು ಹೈವೇ ಪ್ಯಾಟ್ರೋಲ್ ಇಂಟರ್ ಸೆಪ್ಟರ್ ವಾಹನಕ್ಕೆ ಎದುರಿನಿಂದ ಬಂದ ಎಂ ಸ್ಯಾಂಡ್ ತುಂಬಿದ ಟಿಪ್ಪರ್ ವಾಹನ ಢಿಕ್ಕಿ ಮಾಡಿ ಅಪಘಾತ ಉಂಟುಮಾಡಿದ ಪರಿಣಾಮ ಸದರಿ ಹೈವೆ ಪ್ಯಾಟ್ರೋಲ್ ಇಂಟರ್ ಸೆಪ್ಟರ್ ವಾಹನದ ಚಾಲಕ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ AHC ಸಿದ್ದರಾಜನಾಯಕ(34) ರವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸಿ.ಬಿ.ರಿಷ್ಯಂತ್, ಐಪಿಎಸ್ ರವರು ಭೇಟಿ ನೀಡಿ ಪರಿಶೀಲಿಸಿ ಘಟನೆಯ ಬಗ್ಗೆ ಡಿಎಸ್ಪಿ ನಂಜನಗೂಡು ರವರಿಂದ ಮಾಹಿತಿ ಪಡೆದರು.
ಸದರಿಯವರ ಮರಣ ಜಿಲ್ಲಾ ಪೊಲೀಸ್ ಘಟಕಕ್ಕೆ ಅತೀವ ನೋವನ್ನುಂಟು ಮಾಡಿದ್ದು, ಮೃತರ ಕುಟುಂಬಕ್ಕೆ , ಸ್ನೇಹಿತರಿಗೆ, ಸಹೋದ್ಯೋಗಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ. ಸಿ.ಬಿ.ರಿಷ್ಯಂತ್, ಐಪಿಎಸ್ ರವರು ತಿಳಿಸಿದರು.