ಲಾಕ್‌ಡೌನ್ ಹಿನ್ನಲೆ: ಮೈಸೂರಿನಿಂದ ತಮ್ಮ ತಮ್ಮ ಊರಿಗೆ ಹೊರಟ ಜನರು
1 min readಮೈಸೂರು: ಕೋವಿಡ್ 19ನ ಎರಡನೇ ಅಲೆ ತಡೆಯಲು ಮಂಗಳವಾರ ರಾತ್ರಿಯಿಂದ ರಾಜ್ಯ ಸರ್ಕಾರ ಘೋಷಿಸಿರುವ ಜನತಾ ಕರ್ಫ್ಯೂ( ಲಾಕ್‌ಡೌನ್ ) ಜಾರಿಗೆ ಬರವ ಹಿನ್ನೆಲೆಯಲ್ಲಿ ಜನರು ತಮ್ಮ ತಮ್ಮ ಊರಿನತ್ತ ಪ್ರಯಾಣ ಬೆಳೆಸಿದ್ದಾರೆ.
ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳತ್ತ ಮುಖ ಮಾಡಿರುವ ಜನರು ಲಗೇಜ್ ಪ್ಯಾಕ್ ಮಾಡಿಕೊಂಡು ತನ್ನೂರಿನತ್ತ ತೆರಳುತ್ತಿರುವ ದೃಶ್ಯ ನಗರದ ಬಸ್ ನಿಲ್ದಾಣಗಳಲ್ಲಿ ಕಂಡುಬಂತು.
ಮೈಸೂರಿನಿಂದ ಕೇರಳ ಹಾಗೂ ಬೆಂಗಳೂರಿಗೆ ಹೆಚ್ಚು ಜನರ ಪಯಣ ಬೆಳಸುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಹಿಡಿದು ಕುಟುಂಬಸ್ಥರ ವರೆಗು ತಮ್ಮೂರಿನತ್ತ ಹೊರಟಿದ್ದಾರೆ.
ಇನ್ನು ಒಂದೊಂದು ನಿಮಿಷಕ್ಕು KSRTC ಅಧಿಕಾರಿಗಳು ಬಸ್ ವ್ಯವಸ್ಥೆ ಮಾಡಿದ್ದಾರೆ. ನನ್ನೂರು ಮೈಸೂರಿನಲ್ಲಿ ಬಸ್ ನಿಲ್ದಾಣದ ಸಂಪೂರ್ಣ ಚಿತ್ರಣ.