September 7, 2024

ತಮ್ಮ ನಿವಾಸದ ಮೇಲ್ಚೇವಣಿಯಲ್ಲೇ 450ಕ್ಕೂ ಹೆಚ್ವು ಗಿಡ ಮರಗಳನ್ನ ಬೆಳಸಿದ್ದಾರೆ ಈ ದಂಪತಿ

1 min read

ಮೈಸೂರು: ಫಲವತ್ತಾದ ಕೃಷಿಭೂಮಿ, ಕೈತೋಟಗಳಿರುವ ಜನರೇ ಕೃಷಿ ಚಟುವಟಿಕೆ ನಡೆಸಲು ಹಿಂದೇಟು ಹಾಕುತ್ತಿರುವಾಗ ವಾಸವಾಗಿರುವ ನಿವಾಸದ ಮೇಲ್ಚೇವಣಿಯಲ್ಲೇ ಸುಮಾರು 450ಕ್ಕೂ ಹೆಚ್ವು ತಳಿಯ ಗಿಡ ಮರಗಳನ್ನು ಬೆಳೆಸುವ ಮೂಲಕ ಎಚ್.ಡಿ.ಕೋಟೆ ಪಟ್ಟಣದ ರಾನೂ-ಮನು ದಂಪತಿ ಸುದ್ದಿಯಾಗಿದ್ದಾರೆ.

ಮೂಲತಃ ರಾಜಸ್ಥಾನದ ಉದಯಪುರ ರಾನೂ ಮನು ದಂಪತಿ ಕಳೆದ ಸುಮಾರು 27 ವರ್ಷಗಳ ಹಿಂದೆ ಎಚ್.ಡಿ.ಕೋಟೆ ಪಟ್ಟಣದಲ್ಲಿ ಬಂದು ನೆಲೆಸಿ ಸ್ವಂತ ಮನೆ ಕಟ್ಟಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಪಿಹೆಚ್ ಡಿ ಪಡೆದ ರಾನೂ ಅವರಿಗೆ ಪ್ರಕೃತಿ ಪ್ರಾಣಿ ಪಕ್ಷಿ ಗಳೆಂದರೆ ಪಂಚ ಪ್ರಾಣ‌. ಪ್ರಾಣಿ ಪಕ್ಷಿಗಳಿಗೇನಾದರೂ ಅನಾಹುತ ಸಂಭವಿಸಿದ ಸ್ಥಿತಿಯಲ್ಲಿ ಪತ್ತೆಯಾದರೆ ಅವುಗಳಿಗೆ ಪಟ್ಟಣವಷ್ಟೇ ಅಲ್ಲದೆ ಜಿಲ್ಲಾ ಪಶು ಆಸ್ಪತ್ರೆಯ ನುರಿತ ವೈದ್ಯ ರಲ್ಲಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿರುವ ಕೊಡಿಸುತ್ತಿರುವ ನಿದರ್ಶನಗಳು ಸಾಕಷಗಟಿವೆ. ಇನ್ನು ಪ್ರಾಣಿ ಪಕ್ಷಿಗಳಿಗಾಗಿ ಕಾಳುಗಳು ಜೋಳ ಅಕ್ಕಿಮತಹ ಆಹಾರಗಳನ್ನು ಮನೆಯ ಮಹಡಿ ಮೇಲಿರಿಸಿ ಪ್ರತಿದಿನ ನೀರೆರೆಯುವುದೂ ಉಂಟು.

ಪರಿಸರ ಪ್ರಿಯರಾದ ರಾನೂ ಮನು ದಂಪತಿ ತಾವು ವಾಸವಾಗಿರುವ ನಿವಾಸದ ಮಹಡಿ ಮೇಲೆ ಕರ್ನಾಟಕ ರಾಜ್ಯದ ಗಿಡ ಮರಗಳಷ್ಟೇ ಅಲ್ಲದೆ ನೆರೆ ರಾಜ್ಯಗಳಾದ ಗಯಜರಾತ್, ಉತ್ತರ್ ಖಾಂಡ್ , ಡೆಲ್ಲಿ , ವೆಸ್ಟ್ ಬೆಂಗಾಳ್,ತಮಿಳುನಾಡು, ಕೇರಳ, ರಾಜಸ್ಥಾನ, ಮರಳುಗಾಡಿನಲ್ಲಿ ಬೆಳೆಯುವ ಗಿಡ ಮರಗಳ ಕಾಂಡ, ಬಿತ್ತನೆ ಬೀಜಗಳನ್ನು ಆನ್ ಲೈನ್ ನಲ್ಲಿ ಖರೀದಿಸಿ ಹೂವಿನ ಕುಂದಗಳಲ್ಲಿ ಕಸಿ ಮಾಡಿ ಬೆಳೆಸಿಲುತ್ತಿದ್ದಾರೆ. ಅಷ್ಟೇ ಅಲ್ಲದೆ ಅರಳಿ ಆಲದ ಮರಗಳು ಹಣ್ಣು ತರಕಾರಿಗಳನ್ನು ಬೆಳೆಸುವ ಕಲೆ ಕರಗತ ಮಾಡಿಕೊಂಡಿದ್ದಾರೆ.

ಜನರು ಕಂಡು ಕೇಳರಿಯದ ಗಿಡಗಳನ್ನೂ ಕೂಡ ಇವರಲ್ಲಿದ್ದು ಇವರ ಮನೆಗೆ ಭೇಟಿ ನೀಡಿದರೆ ಯಾವುದೋ ಕೈತೋಟದಲ್ಲಿರುವಂತೆ ಭಾಸವಾಗುತ್ತದೆ. ಗಿಡಗಕಲನ್ನು ಬೆಲೆಸಲು ತಜ್ಣರ ಸಲಹೆ ಸಹಕಾರ ಪಡೆದುಕೊಳ್ಳುವ ರಾನೂ ಗಿಡಗಳುಗಾಗಿ ಮನೆಯಲ್ಲಿಯೇ ಒಣಗಿದ ಎಲೆಗಳು ಅಡಿಗೆ ಮನೆಯಲ್ಲಿನ ತ್ಯಾಜ್ಯ ಬಳಕೆ ಮಾಡಿ ಜೈವಿಕಗೊಬ್ಬರ ತಯಾರಿ ಮಾಡಿಕೊಳ್ಳುತ್ತಾರೆ. ಪಿಹೆಚ್ ಡಿ ಪದವಿ ಧರೆಯಾದ ಇವರು ಖಾಸಗಿ ಶಾಲೆಯೊಂದರಲ್ಲಿ ಮುಖ್ಯಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಾ ಬಿಡುವಿನ ವೇಳೆಯಲ್ಲಿ ಇಷ್ಟೆಲ್ಲಾ ಪರಿಸರ ಗಿಡಗಳನ್ನು ಬೆಳೆಸುವ ಹವ್ಯಾಸ ಹೊಂದಿದ್ದಾರೆ. ಇವರ ಪತಿ ಮನೋಜ್ ಕೂಡ ಪರಿಸರ ಪ್ರೇಮಿಯಾಗಿದ್ದು ಮನೆಯಲ್ಲಿ ಬೆಕಲೆದಿರುವ ಗಿಡಗಳ ಪೈಕಿ ಆಕ್ಸಿಜನ್ ಹೊರಸೂಸುವ ಗಿಡಗಳನ್ನು ಬೆಳೆಸುತ್ತಾ ಹವ್ಯಾಸಿ ವನ್ಯಜೀವಿ ಛಾಯಾಗ್ರಾಹಕರಾಗಿದ್ದಾರೆ.

ಇವರು ಬೆಳೆಸಿರುವ ಗಿಡಗಳ ವೀಕ್ಷಣೆಗೆ ಎರಡುವರ್ಷದ ಹಿಂದೆ ದಸರಾ ಉದ್ಘಾಟಿಸಿದ ಕೀರ್ತಿಪಾತ್ರರೂ, ಪ್ರಗತಿಪರ ರೈತರೂ ಕೃಷಿ ಪಂಡಿತ ಪುರಸ್ಕೃತರೂ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಮಲಾರ ಪುಟ್ಟಯ್ಯ ಮತ್ತು ಸಹಾಯಕ ಕೃಷಿ ನಿರ್ದೇಶಕ ಡಾ.ವೆಂಕಟೇಶ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಈಗಲೂ ರಾನೂ ಅವರ ನಿವಾಸದ ಮಹಡಿ ಮೇಲೆರಿದರೆ ಯಾವುದೋ ಮಿನಿ ಕೈತೋಟಕ್ಕೆ ಭೇಟಿ ನೀಡಿರುವ ಅನುಭವ ಉಂಟಾಗುತ್ತದೆ.

ಕ್ಷೀಣಿಸುತ್ತಿರುವ ಗುಬ್ಬಿಗಳ ಫೋಷಣೆಯ ಸಲುವಾಗಿ ಮನೆಯ ಮೇಲ್ಚಾಣಿಯಲ್ಲಿ ಡಬ್ಬಿಗಳಾಕೃತಿ ಮಾಡಿ ಅದರಲ್ಲಿ ಆಹಾರ ಇರಿಸಿ ಗುಬ್ನಿಗಳ ಪೋಷಣೆಗೂ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

About Author

Leave a Reply

Your email address will not be published. Required fields are marked *