ಹೊರ ಜಿಲ್ಲೆಗಳ ಪ್ರಯಾಣಿಕರು, ಸೋಂಕಿತರಿಗೂ ಮೈಸೂರಿಗೆ ಪ್ರವೇಶವಿಲ್ಲ
1 min readಮೈಸೂರು: ಹೊರ ಜಿಲ್ಲೆಗಳ ಪ್ರಯಾಣಿಕರು ಸೋಂಕಿತರಿಗೂ ಮೈಸೂರಿಗೆ ಪ್ರವೇಶವಿಲ್ಲ ಅಂತ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಸ್ ಟಿ ಸೋಮಶೇಖರ್ ಕೊನೆ ಕ್ಷಣದಲ್ಲಿ ಸೋಂಕಿತರು ಮೈಸೂರಿಗೆ ಬರುತ್ತಿದ್ದಾರೆ. ಇದರಿಂದ ಹೆಚ್ಚಿನ ಸಾವು ನೋವುಗಳಾಗುತ್ತಿವೆ. ಆದ್ದರಿಂದ ಮೈಸೂರು ಜಿಲ್ಲೆಗೆ ಎಲ್ಲಾ ರೀತಿಯ ನಿರ್ಬಂಧ ಹೇರಲಾಗಿದೆ. ಹೊರ ಜಿಲ್ಲೆಗಳ ಪ್ರಯಾಣಿಕರು, ಸೋಂಕಿತರಿಗೂ ಮೈಸೂರಿಗೆ ಪ್ರವೇಶವಿಲ್ಲ ಅಂತ ಹೇಳಿದರು.
ಮೈಸೂರಿಗೆ ಇನ್ನು ಹೆಚ್ಚುವರಿ ಆಕ್ಸಿಜನ್ ಅವಶ್ಯಕತೆ ಇದೆ. ನಮ್ಮ ಕೋಟಾ ಹೆಚ್ಚಿಸಲು ಸರ್ಕಾರವನ್ನ ಕೇಳಿದ್ದೇನೆ. ನಮಗೆ ಆಕ್ಸಿಜನ್ ಖೋಟಾ ಹೆಚ್ಚಾಗಬಹುದು. ನಮ್ಮಲ್ಲಿ ಪಾಸಿಟಿವ್ ಪ್ರಕರಣ ಕರೋನಾ ರೋಗಿಗಳ ಸಂಖ್ಯೆ ಆಧರಿಸಿ. ಹೆಚ್ಚುವರಿ ಆಕ್ಸಿಜನ್‌ಗೆ ಮನವಿ ಮಾಡಿದ್ದೇನೆ. ಅಂತರ್ ಜಿಲ್ಲಾ ಓಡಾಟ ಇರುವ ಕಾರಣ. ಬೇರೆ ಜಿಲ್ಲೆಗಳಿಂದ ಮೈಸೂರಿಗೆ ಬರುವ ಕರೋನಾ ರೋಗಿಗಳ ಸಂಖ್ಯೆ ಕಡಿಮೆ ಆಗಲಿದೆ ಎಂದರು.
ಸುತ್ತೂರು ಶ್ರೀಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆ:
ಮೈಸೂರಿನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳ ಹಿನ್ನೆಲೆ. ಸುತ್ತೂರು ಶ್ರೀಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರ ಸಭೆ ನಡೆಯಿತು. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ JSS ಆಸ್ಪತ್ರೆಯಲ್ಲಿ ಹೆಚ್ಚುವರಿ ಬೆಡ್ ಗಳನ್ನ ಕಲ್ಪಿಸಿಕೊಡುವ ಬಗ್ಗೆ ಮಾತುಕತೆ ನಡೆಯಿತು. ಸಭೆಯಲ್ಲಿ ಸುತ್ತೂರು ಶ್ರೀ, ಸಚಿವ ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕ ಎಲ್.ನಾಗೇಂದ್ರ ಭಾಗಿಯಾಗಿದ್ದರು.