ನಮ್ಮದು ರೈತ ಪರ ಸರ್ಕಾರ: ಸಿಎಂ ಯಡಿಯೂರಪ್ಪ
1 min readಬೆಂಗಳೂರು: ಸಹಕಾರ ಇಲಾಖೆ ಹಾಗೂ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತದ ವತಿಯಿಂದ ಆಯೋಜಿಸಿದ್ದ ರೈತ ಸ್ಪಂದನ- 2021- 22 ನೇ ಸಾಲಿನ ವಿವಿಧ ಕೃಷಿ ಸಾಲ ವಿತರಣಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಚಾಲನೆ ನೀಡಿದರು.
ಈ ನಂತರ ಸಿಎಂ ಯಡಿಯೂರಪ್ಪ ಅವರು ಮಾತನಾಡಿ ನಮ್ಮದು ರೈತ ಪರ ಸರ್ಕಾರ. ಶಿಕ್ಷಣ, ಆರೋಗ್ಯ, ಕೃಷಿಗೆ ನಮ್ಮ ಸರ್ಕಾರ ಆದ್ಯತೆ ನೀಡುತ್ತಿದೆ. ಕೊವಿಡ್ ಸಂಕಷ್ಟದ ಸಮಯದಲ್ಲಿ ಸಹಕಾರಿ ಕ್ಷೇತ್ರದ ಕಾರ್ಯ ಶ್ಲಾಘನೀಯ. ಕೊವಿಡ್’ಗಾಗಿ ಸಹಕಾರಿ ಸಂಘಗಳಿಂದ 58 ಕೋಟಿ ರೂಪಾಯಿಗಳ ದೇಣಿಗೆಯನ್ನು ಮುಖ್ಯ ಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದೆ. 30.26 ಲಕ್ಷ ರೈತರಿಗೆ ಸಾಲ ನೀಡುವ ಗುರಿ ಸರ್ಕಾರದ್ದು. ಸ್ರ್ತಿ ಶಕ್ತಿ ಸಂಘಗಳಿಗೆ 400 ಕೋಟಿ ಸಾಲ ವಿತರಣೆಯ ಗುರಿ, ಹೂ, ಹಣ್ಣು ನಷ್ಟದ ಫಲಾನುಭವಿಗಳಿಗೆ 10 ಸಾವಿರ ರೂಪಾಯಿಗಳನ್ನು ಕೊವಿಡ್ ಪರಿಹಾರ ನೀಡಲಾಗಿದೆ.
ಅಭಿವೃದ್ಧಿ ಆಗಿಲ್ಲ ಎನ್ನುವವರಿಗೆ ಈ ಅಂಕಿ ಅಂಶಗಳು ಉತ್ತರ. ಕೊವಿಡ್ ಇಂದ ಮೃತರಾದವರಿಗೆ 1 ಲಕ್ಷ ನೀಡ್ತಿದ್ದೇವೆ. ಯಾವುದೇ ಅಭಿವೃದ್ದಿ ಕಾರ್ಯಗಳು ನಿಂತಿಲ್ಲ. ಇಂದಿನಿಂದ ಎಲ್ಲದಕ್ಕೂ ವಿನಾಯಿತಿ ನೀಡಲಾಗಿದೆ. ಕೊವಿಡ್ ಹೋಗಿದೆ ಎಂದು ಭ್ರಮೆ ಬೇಡ. ಮಾಸ್ಕ್ ಧರಿಸಲೇಬೇಕು ಎಚ್ಚರಿಕೆ ಅಗತ್ಯ ಅಂತ ಹೇಳಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ , ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್, ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ರಾಜೇಂದ್ರ ಕುಮಾರ್ ಉಪಸ್ಥಿತರಿದ್ದರು.