ಮೈಸೂರು – 3 ವರ್ಷ ಕೆಲಸಕ್ಕೆ ಚಕ್ಕರ್- ಆದರು ಸಂಬಳ ಅಕೌಂಟ್‌ಗೆ ಬಂದಿದೆ!
1 min read
ಮೂರು ವರ್ಷ ಕೆಲಸಕ್ಕೆ ಬಾರದಿದ್ರು HD ಕೋಟೆಯ ಪುರಸಭೆಯ ಅಧಿಕಾರಿ ಸಂಬಳ ಪಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪುರಸಭೆ ಸದಸ್ಯರ ಸಭೆಯಲ್ಲಿ ಸದಸ್ಯನಿಂದ ಈ ಅಕ್ರಮ ಬಯಲಿಗೆ ಬಂದಿದ್ದು, ಪುರಸಭೆಯ ಅಧಿಕಾರಿಯೇ ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಕೇಳಿ ಬಂದಿದೆ.

ಕೆಲಸಕ್ಕೆ ಹಾಜರಾಗದಿದ್ರೂ ಹೆಚ್ ಡಿ ಕೋಟೆಯ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಸಂಬಳ ಪಡೆದಿದ್ದಾರೆ. ಆದರೆ ಇದು ಹೆಚ್.ಡಿ.ಕೋಟೆ ಪುರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆರೋಪ ಮಾಡಿದ್ದು ಶಾಸಕ ಅನಿಲ್ ಚಿಕ್ಕಮಾದು ಅವರಿಗೆ ಪುರಸಭೆ ಸದಸ್ಯರಿಂದ ದೂರು ನೀಡಿದ್ದಾರೆ. ಪುರಸಭೆಯ ಸಂಘಟನಾಧಿಕಾರಿ ಉಮಾಶಂಕರ್ ವಿರುದ್ಧ ಈ ದೂರು ನೀಡಿದ್ದು, ಮೂರು ವರ್ಷಗಳ ಕಾಲ ಕರ್ತವ್ಯಕ್ಕೆ ಹಾಜರಾಗದ ಈ ಅಧಿಕಾರಿ ಪ್ರತೀ ತಿಂಗಳು 45ಸಾವಿರ ಸಂಬಳ ಪಡೆದಿದ್ದಾರೆ.


ಅಲ್ಲದೆ ದಾಖಲಾತಿ ತಿದ್ದುಪಡಿ ಮಾಡಿ ನೇರ ಖಾತೆಗೆ ತನ್ನ ವೇತನ ವರ್ಗಾವಣೆ ಮಾಡಿಕೊಂಡಿರುವ ಆರೋಪವು ಕೇಳಿ ಬಂದಿದ್ದು, ವೇತನ ಮಂಜೂರು ಮಾಡಿದ ಹಿಂದಿನ ಪುರಸಭೆ ಮುಖ್ಯಾಧಿಕಾರಿ.?
ವೇತನ ಪಡೆದ ಉಮಾಶಂಕರ್ ವಿರುದ್ಧ ಕ್ರಮಕ್ಕೆ ಕೂಡಲೇ ಶಿಸ್ತುಕ್ರಮ ಜರುಗಿಸುವಂತೆ ಶಾಸಕರಿಗೆ ಒತ್ತಾಯಿಸಲಾಗಿದೆ. ಇತ್ತ ಶಾಸಕರು ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದು, ಸಂಪೂರ್ಣ ವರದಿ ನೀಡುವಂತೆಯು ಸೂಚನೆ ನೀಡಲಾಗಿದೆ. ಆದರೆ ಈ ಹಿಂದೆ ಇದ್ದ ಪುರಸಭೆ ಮುಖ್ಯಾಧಿಕಾರಿಯ ಮೇಲು ಅನುಮಾನ ವ್ಯಕ್ತವಾಗಿದ್ದು, ಒಂದು ತಿಂಗಳ ಹಿಂದಷ್ಟೇ ಹೊಸ ಪುರಸಭೆ ಮುಖ್ಯಾಧಿಕಾರಿ ಆಗಮನವಾಗಿದ್ದು ನೂತನ ಮುಖ್ಯಾಧಿಕಾರಿ ಹೆಗಲಿಗೆ ಹಗರಣದ ತನಿಖೆ ಜವಬ್ದಾರಿ ಕೊಡಲಾಗಿದೆ.