ಮೈಸೂರಿನ NTMS ಶಾಲೆ ಉಳಿಸಿ ಹೋರಾಟಕ್ಕೆ ಸಾಥ್ ನೀಡಿದ ಮೈಸೂರು ವಿವಿ ಸಂಶೋಧಕರ ಸಂಘ
1 min read
ಮೈಸೂರು ವಿಶ್ವವಿದ್ಯಾನಿಲಯ ಸಂಶೋಧಕರ ಸಂಘದ ವತಿಯಿಂದ (NTMS) ಶಾಲೆ ಉಳಿಸಿ ಹೋರಾಟದಲ್ಲಿ ಭಾಗಿಯಾಗಿದ್ದರು. ಸಂಶೋಧಕರ ಸಂಘದ ಅಧ್ಯಕ್ಷರಾದ ಮಹೇಶ್ ಸೋಸ್ಲೆ ನೇತೃತ್ವದಲ್ಲಿ ಶಾಲೆಯ ಹಾಗೂ ಹೆಣ್ಣು ಮಕ್ಕಳ ಶಿಕ್ಷಣದ ಕುರಿತು ಸುದೀರ್ಘ ಇತಿಹಾಸವನ್ನು ತಿಳಿಸಿ ರಾಮಕೃಷ್ಣ ಆಶ್ರಮದ ವಿರುದ್ಧ ಆಕ್ರೋಶ ಹೊರಹಾಕಿದ್ರು.
ಕರ್ನಾಟಕದ ಮೊಟ್ಟ ಮೊದಲ ಐತಿಹಾಸಿಕ ಬಾಲಕಿಯರ ಕನ್ನಡ ಶಾಲೆಯಾಗಿದ್ದು, ವಿವೇಕಾನಂದರ ಸ್ಮಾರಕವು ನಿರ್ಮಾಣವಾಗಲಿ ಶಾಲೆಯು ಉಳಿಯಲಿ ಎಂಬ ಘೋಷವಾಕ್ಯವನ್ನು ತಿಳಿಸಿ ಹೆಣ್ಣು ಮಕ್ಕಳ ಶಾಲೆಯ ಉಳಿಯುಗಾಗಿ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದ್ರು. ಇಂದಿನ ಹೋರಾಟದಲ್ಲಿ ಸಂಶೋಧಕರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು, ಇತಿಹಾಸ ತಜ್ಞರು ಮಾಜಿ ಮೇಯರ್ ಸೇರಿ ಪ್ರಮುಖ ಸಂಘಟನೆಗಳು ಭಾಗಿಯಾಗಿದ್ದರು.
