ಪ್ರವಾಹ ಮುನ್ಸೂಚನೆ ಹಿನ್ನಲೆ: ನಂಜನಗೂಡಿನಲ್ಲಿ ಹೈ ಅಲರ್ಟ್

1 min read

ನಂಜನಗೂಡು: ಕಪಿಲಾ ನದಿಯಲ್ಲಿ ಪ್ರವಾಹದ ಮುನ್ಸೂಚನೆ ನೀಡಿರುವ ಹಿನ್ನೆಲೆ ಶಾಸಕ ಹರ್ಷವರ್ಧನ್ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ನಡೆದಿದೆ. ನಂಜನಗೂಡಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಹೈ ಅಲರ್ಟ್ ಗೆ ಅಧಿಕಾರಿಗಳು ಮುಂದಾಗಿದ್ದಾರೆ.ಶಾಸಕ ಹರ್ಷವರ್ಧನ್ ಅಧ್ಯಕ್ಷತೆಯಲ್ಲಿ ತಹಸೀಲ್ದಾರ್ ಶಿವಮೂರ್ತಿ ನೇತೃತ್ವದಲ್ಲಿ ಮಿನಿವಿಧಾನಸೌಧದ ಸಭಾಂಗಣದಲ್ಲಿ ಹೈ ಅಲರ್ಟ್ ಸಭೆ ನಡೆದಿದೆ.

ಕಪಿಲಾ ನದಿಯ ಸುತ್ತಮುತ್ತಲ ತಗ್ಗು ಪ್ರದೇಶದ ನಿವಾಸಿಗಳಿಗೆ ಜಾಗೃತಿ ಮೂಡಿಸುವ ಹಾಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವ ಸಲುವಾಗಿ ಸಭೆ ಕರೆಯಲಾಗಿದೆ. ಕಳೆದ ವರ್ಷದ ಪ್ರವಾಹದಲ್ಲಿ ಕಪಿಲಾ ನದಿಯಲ್ಲಿ ಬರೋಬ್ಬರಿ 1ಲಕ್ಷದ 10ಸಾವಿರ ಕ್ಯೂಸೆಕ್ಸ್ ನೀರು ಹರಿಬಿಡಲಾಗಿತ್ತು. ನಂಜನಗೂಡು ಪಟ್ಟಣ, ಹುಲ್ಲಹಳ್ಳಿ ಮತ್ತು ಕಸಬಾ ಹೋಬಳಿ ವ್ಯಾಪ್ತಿಯ ಸಾರ್ವಜನಿಕ ನಿವಾಸಿಗಳಿಗೆ ಸಮಸ್ಯೆ ಎದುರಾಗಿತ್ತು.

ತಾಲ್ಲೂಕಿನಾದ್ಯಂತ ಶಿಥಿಲವಾಗಿದ್ದ ಸರ್ಕಾರಿ ಶಾಲೆಗಳು ಕೊಠಡಿ ಅಂಗನವಾಡಿ ಕೇಂದ್ರಗಳು ಹಾಳಾಗಿದ್ದವು. ರೈತರ ಜಮೀನು ಜಲಾವೃತವಾಗಿತ್ತು. ಈ ಬಾರಿಯ ಪ್ರವಾಹ ಹಿನ್ನಲೆ ತಾಲ್ಲೂಕಿನಾದ್ಯಂತ ಅಧಿಕಾರಿಗಳು ಹೈ ಅಲರ್ಟ್ ಆಗಿರಬೇಕು ಎಂದು ಶಾಸಕರು ಸೂಚನೆ ನೀಡಿದ್ದಾರೆ.

ಪ್ರವಾಹದ ಸಂದರ್ಭದಲ್ಲಿ ಗೈರಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಾಸಕ ಹರ್ಷವರ್ಧನ್ ನಿರ್ಧರಿಸಿದ್ದಾರೆ.ಈ ಕ್ಷಣದಿಂದಲೇ ತಾಲ್ಲೂಕಿನಾದ್ಯಂತ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಹಾಯವಾಣಿ ಸ್ಥಾಪನೆ ಮಾಡಲು ಸೂಚನೆ ನೀಡಿದ್ದಾರೆ.

08221-223108,ಈ ನಂಬರಿಗೆ ಕರೆ ಮಾಡಲು ಹರ್ಷವರ್ಧನ್ ಮನವಿ ಮಾಡಿದ್ದಾರೆ.

ನಂಜನಗೂಡು ಪಟ್ಟಣದ ತಗ್ಗು ಪ್ರದೇಶದ ಬಡಾವಣೆಗಳಲ್ಲಿ ನಷ್ಟ ಸಂಭವಿಸಿದ್ದು ಈ ಬಾರಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.ತಗ್ಗು ಪ್ರದೇಶದ ನಿವಾಸಿಗಳನ್ನ ಸುರಕ್ಷಿತ ಸ್ಥಳಗಳಿಗೆ ತೆರಳಲು ಎಚ್ಚರಿಕೆ ಸಂದೇಶ ನೀಡುವಂತೆ ತಿಳಿಸಿದ್ದಾರೆ.ನಂಜುಂಡೇಶ್ವರನ ದೇವಾಲಯದ ದಾಸೋಹ ಭವನದಲ್ಲಿ ಭಿಕ್ಷುಕರಿಗೆ ಊಟ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡುವಂತೆ ತಿಳಿಸಿದ್ದಾರೆ. ಪ್ರವಾಹ ಮುಗಿಯುವತನಕ ದಾಸೋಹ ಭವನದಲ್ಲಿ ಆಹಾರ ನೀಡಲು ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಾಲ್ಲೂಕು ಆಡಳಿತದ ವತಿಯಿಂದ ಆಶ್ರಯ ತಾಣ ತೆರೆಯಲು ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.ಸಭೆಯಲ್ಲಿ ನಂಜನಗೂಡಿನ ತಹಸೀಲ್ದಾರ್ ಶಿವಮೂರ್ತಿ, ನಗರಸಭೆ ಆಯುಕ್ತರಾದ ರಾಜಣ್ಣ ನಗರಸಭೆ ಅಧ್ಯಕ್ಷರಾದ ಮಹದೇವಸ್ವಾಮಿ ಸೇರಿದಂತೆ ತಾಲ್ಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

About Author

Leave a Reply

Your email address will not be published. Required fields are marked *