ನಾಲ್ವಡಿ ಒಡೆಯರ್ ಅವರ ಸಾಧನೆ ಗೊತ್ತಾ..? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..!

1 min read

ಮೈಸೂರು: ಎಲ್ಲಾ ರಾಜರು ರಾಜ್ಯ ವಿಸ್ತಾರ ಮಾಡೋಕೆ ಅಂತ ಯುಧ್ಧ, ತಂತ್ರಗಾರಿಕೆ, ಸ್ನೇಹ ಸಂಬಂಧ, ಮಾಡ್ತಿದ್ದರೆ ಇಲ್ಲೊಬ್ಬ ರಾಜ ತನ್ನ ರಾಜ್ಯವನ್ನು ಮಾಧರಿಯನ್ನಾಗಿಸಲು ಯೋಜನೆ ರೂಪಿಸುವಲ್ಲಿ ಹಾಗು ಅದರ ಅನುಷ್ಠಾನದಲ್ಲಿ ಮಗ್ನರಾಗಿದ್ದರು ಅವರೇ ನಮ್ಮ ಆಧುನಿಕ ಮೈಸೂರಿನ ಪಿತಾಮಹ ಶ್ರೀಮನ್ಮಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್…

  • 1902 ರಲ್ಲಿ ಏಷ್ಯಾದಲ್ಲೆ ಪ್ರಥಮ ವಿದ್ಯುತ್ ಉತ್ಪಾಧನ ಘಟಕ ಸ್ಥಾಪಿಸಿದರು.
  • 1903 ರಲ್ಲಿ ಮಿಂಟೊ ಕಣ್ಣಿನ ಆಸ್ಪತ್ರೆ ನಿರ್ಮಾಣ.
  • 1905 ರಲ್ಲಿ ಬೆಂಗಳೂರಿಗೆ ವಿದ್ಯುತ್ ಸಂಪರ್ಕ (ಏಷ್ಯಾದಲ್ಲೆ ಪ್ರಥಮ)
  • 1907 ವಾಣಿ ವಿಲಾಸಸಾಗರ ಅಣೆಕಟ್ಟೆ (ಮುಕ್ತಾಯ ವರ್ಷ)
  • 1907 ಮೈಸೂರು ಪ್ರಜಾ ಪ್ರತಿನಿಧಿ ಸಭೆ.
  • 1909 ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆ.
  • 1909 ಭಾರತದ ಮೊದಲ ಬಾಯ್ಸ್ ಸ್ಕೌಡ್ ತರಬೇತಿ
  • 1910 ಕೃಷ್ಣರಾಜ ಸಾಗರ ಅಣೆಕಟ್ಟೆಗೆ ಶಂಕುಸ್ಥಾಪನೆ.
  • 1913 ಸ್ಟೇಟ್ ಬ್ಯಾಂಕ್ ಆಫ್ ಮೈಸೂರು.
  • 1913 ಕೃಷಿ ವಿಶ್ವವಿದ್ಯಾನಿಲಯದ ಸ್ಥಾಪನೆ.
  • 1915 ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ
  • 1916 ಮೈಸೂರು ವಿಶ್ವವಿದ್ಯಾನಿಲಯದ ಸ್ಥಾಪನೆ.
  • 1916 ಯುವರಾಜ ಕಾಲೇಜು.
  • 1916 ಮೈಸೂರು ಚೇಂಬರ್ ಆಫ್ ಕಾಮರ್ಸ್.
  • 1917 ಮಹಾರಾಣೀ ಮಹಿಳಾ ಕಾಲೇಜು.
  • 1918 ಜಸ್ಟಿಸ್ ಮಿಲ್ಲರ್ ಸಮಿತಿ ಸ್ಥಾಪನೆ
  • 1921 ಲಲಿತ ಮಹಲ್ ಅರಮನೆ ಸ್ಥಾಪನೆ.
  • 1921 ವಿಜ್ಞಾನ ಕಾಲೇಜು ಬೆಂಗಳೂರು.
  • 1923 ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ.
  • 1924 ಮೈಸೂರು ಮೆಡಿಕಲ್ ಕಾಲೇಜು.
  • 1925 ಕೃಷ್ಣರಾಜನಗರ ಸ್ಥಾಪನೆ.
  • 1925 nihmans ಆಸ್ಪತ್ರೆ ಸ್ಥಾಪನೆ.
  • 1927 ಕೃಷ್ಣರಾಜ ಆಸ್ಪತ್ರೆ ಮೈಸೂರು.
  • 1928 ಬೆಂಗಳೂರು ಕೆ ಆರ್ ಮಾರುಕಟ್ಟೆ.
  • 1930 ಮಾರ್ಕೋನಹಳ್ಳಿ ಡ್ಯಾಮ್ ತುಮಕೂರು.
  • 1933 ಮೈಸೂರು ಸಕ್ಕರೆ ಕಾರ್ಖಾನೆ ಮಂಡ್ಯ.
  • 1933 ಕೆ ಆರ್ ಮಿಲ್.
  • 1933 ಬೆಂಗಳೂರು ಟೌನ್ ಹಾಲ್.
  • 1933 ಸಂತ ಫಿಲೊಮಿನ ಚರ್ಚ್ ಮೈಸೂರು.
  • 1934 ವಾಣಿವಿಲಾಸ ಮಕ್ಕಳ ಆಸ್ಪತ್ರೆ.
  • (1935 ಮೈಸೂರು ಪೇಪರ್ ಮಿಲ್ ಭದ್ರಾವತಿ.*
  • 1936 ಮೈಸೂರು ಲ್ಯಾಂಪ್ಸ್.
  • 1937 ಮೈಸೂರು ಪೆಂಟ್ ಅಂಡ್ ವಾರ್ನಿಷ್
  • 1937 ಪೆಪರ್ ಮಿಲ್ ಬೆಳಗೊಳ
  • 1938 ಮಹಾರಾಣಿ ಮಹಿಳಾ ಕಾಲೇಜು
  • 1939 ಮಂಡ್ಯ ಜಿಲ್ಲೆ ನಿರ್ಮಾಣ.
  • *1939 ಹಿರೇಭಾಸ್ಕರ ಅಣಕಟ್ಟೇ 
  • ಮಹಾತ್ಮ ಗಾಂಧಿ ವಿದ್ಯುತ್ ಉತ್ಪಾದನ ಘಟಕ ಜೋಗ.*
  • ಬಾಲ್ಯ ವಿವಾಹ ರದ್ದತಿ.
  • ಮಹಿಳಾ ಶಿಕ್ಷಣಕ್ಕೆ ಒತ್ತು.
  • ಹಿಂದುಳಿದವರ ಸುಧಾರಣೆಗಾಗಿ ಮೀಸಲಾತಿ

ಇಂತಹ ಇನ್ನು ಅಸಂಖ್ಯಾತ ಸಾಧನೆ ಮಾಡಿದ ಜನಹಿತ ಚಿಂತಕರು ನಮ್ಮ ರಾಜರು.

ಬದುಕಿನುದ್ದಕ್ಕೂ ಸಮಾಜದ ಹಿತ ಹಾಗು ಅದರ ಅಭಿವೃದ್ದಿ ಭಯಸಿದ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮ ಜಯಂತಿಯಿಂದು ಅಗಲಿದ ಮಹಾ ಚೇತನವನ್ನು ಸ್ಮರಿಸೋಣ.

ನಿನ್ನೆ ಮೊನ್ನೆ ಚನ್ನಕ್ಕ ಅಂತ ಒಂದು ಕಟ್ಟಡ ಕಟ್ಟಿದವರನ್ನೆ  ಸಾಧಕರು ಎನ್ನುವ ಅವರನ್ನು ಕೊಂಡಾಡುವ ಈ ಕಾಲಘಟ್ಟದಲ್ಲಿ ನಾಡುಕಟ್ಟಿದ ನಾಲ್ವಡಿ ಯವರನ್ನು ನೆನೆಯುವುದು ನಮ್ಮ ಆದ್ಯ ಕರ್ತವ್ಯ ..

ಆಳುವ ಸರ್ಕಾರಗಳು ಕೃಷ್ಣರಾಜ ಒಡೆಯರ್ ಜಯಂತಿಯನ್ನು ನಾಡಹಬ್ಬ ದ ರೀತಿ ಆಚರಿಸಬೆಕು ಆಗ ಮಾತ್ರ ಅವರ ಸಾಧನೆಗಳ ಜತೆಗೆ ನಾಲ್ವಡಿಯವರು ಮುಂದಿನ ಪೀಳಿಗೆಯ ಮನಸಿನಲ್ಲಿ ಚಿರಕಾಲ ಉಳಿಯುವರು…

ಮರೆಯದಿರು ಮನುಜ ನಾಲ್ವಡಿಯ ಸಾಧನೆಗಳನ್ನ- ನಾಡ ಜನರಿಗಾಗಿ ಅವರು ತಂದ ಯೋಜನೆಯ ಮೊದಲುಗಳನ್ನ..

About Author

Leave a Reply

Your email address will not be published. Required fields are marked *