ನಾಳೆಯಿಂದ ಜ಼ೂ – ಕಾರಂಜಿಕೆರೆ ಓಪನ್- ಕಂಡಿಷನ್ ಅಪ್ಲೈ!
1 min readಮೈಸೂರು : ಪ್ರಾಣಿಪ್ರಿಯರಿಗೆ ಮೈಸೂರು ಮೃಗಾಲಯ ಪ್ರಾಧಿಕಾರ ಗುಡ್ ನ್ಯೂಸ್ ನೀಡಿದ್ದು ಪ್ರವಾಸಿಗರಿಗೆ ನಾಳೆಯಿಂದ ಪ್ರಾಣಿಗಳನ್ನ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಮೈಸೂರು ಮೃಗಾಲಯದ ಅಧಿಕಾರಿಗಳು ಕರೋನಾ ನಿಯಮ ಪಾಲಿಸುವ ಮೂಲಕ ಮೃಗಾಲಯಕ್ಕೆ ಬರುವಂತೆ ಮನವಿ ಮಾಡಿದ್ದಾರೆ.
ಇದರ ಜೊತೆಗೆ ಬೋಟಿಂಗ್ ಮಾಡುವ ಪ್ರವಾಸಿಗರಿಗು ಗುಡ್ ನ್ಯೂಸ್ ಇದ್ದು ಕಾರಂಜಿಕೆರೆ ಓಪನ್ ಆಗ್ತಿದೆ. ಇದ್ರಿಂದ ನಾಳೆಯಿಂದ ಅನ್‌ಲಾಕ್ ಇರುವ ಕಾರಣ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆಯು ಮೃಗಾಲಯದ ಅಧಿಕಾರಿಗಳು ಸೂಚಿಸಿದ್ದಾರೆ.