ಬಿಜೆಪಿ, ಆರ್‌ಎಸ್‌ಎಸ್ ತಾಲಿಬಾನ್: ಮೈಸೂರು ಯುವ ಕಾಂಗ್ರೆಸ್ ಪ್ರತಿಭಟನೆ
1 min readಮೈಸೂರು: ಧ್ರುವನಾರಾಯಣ್ ವಿರುದ್ಧ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ವಿಚಾರ. ಮೈಸೂರು ಯುವ ಕಾಂಗ್ರೆಸ್‌ನಿಂದಲು ಪ್ರತಿ ಪ್ರತಿಭಟನೆ ನಡೆಯುತ್ತಿದೆ.
ಮೈಸೂರಿನ ರಾಮಸ್ವಾಮಿ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು. ಬಿಜೆಪಿ, ಆರ್‌ಎಸ್‌ಎಸ್ ತಾಲಿಬಾನ್ ಎಂದು ಘೋಷಣೆ. ಬಿಜೆಪಿ ಹಾಗು ಆರ್ ಎಸ್ ಎಸ್ ವಿರುದ್ಧ ಧಿಕ್ಕಾರದ ಘೋಷಣೆ. ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕುಲ ಯತ್ನಿಸಿದ ಪ್ರತಿಭಟನಾಕಾರರು. ಬ್ಯಾರಿಕೇಡ್ ತಳ್ಳಿ ಮುನ್ನುಗ್ಗಿದ ಪ್ರತಿಭಟನಾಕಾರರು. ಸ್ಥಳದ ಬಿಗುವಿನ ವಾತಾವರಣ. ದೇವ ಪಾರ್ಥೀವ ರಸ್ತೆಯಲ್ಲಿ ಪ್ರತಿಭಟನಾಕಾರನ್ನು ಅಡ್ಡಗಟ್ಟಿದ ಪೊಲೀಸರು. ಪೊಲೀಸರು ಪ್ರತಿಭಟನಾಕಾರರ ನಡುವೆ ಜಗ್ಗಾಟ.
ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಅಡ್ಡಗಟ್ಟಿದ ಪೊಲೀಸರು. 20ಕ್ಕೂ ಹೆಚ್ಚು ಪ್ರತಿಭಟನಾಕಾರಾರ ಬಂಧನ. ಬಿಜೆಪಿ ಕಚೇರಿ ಬಳಿ ಪ್ರತಿಭಟನಾಕಾರನ್ನು ಬಂಧಿಸಿ ಕರೆದೊಯ್ಯದ ಪೊಲೀಸರು. ಸ್ಥಳದಲ್ಲಿ ಹೆಚ್ಚಿನ ಪೊಲೀಸರ ನಿಯೋಜನೆ.