ರಾಜ್ಯದ ಆದೇಶದಂತೆಯೇ ಮೈಸೂರಿನಲ್ಲಿ ಅನ್‌ಲಾಕ್- ಜಿಲ್ಲಾಡಳಿತದ ಮೂಲಗಳಿಂದ ಮಾಹಿತಿ!

1 min read

ಮೈಸೂರು : ನಾಳೆಯಿಂದ ರಾಜ್ಯದಲ್ಲಿ ನೂತನ ಅನ್‌ಲಾಕ್ ಜಾರಿ ಮಾಡಿದ್ದು ರಾಜ್ಯದ ಆದೇಶದಂತೆಯೇ ಮೈಸೂರಿನಲ್ಲು ಅನ್‌ಲಾಕ್ ಮಾರ್ಗಸೂಚಿ ಇರಲಿದೆ ಎಂದು ಜಿಲ್ಲಾಡಳಿತದ ಮೂಲಗಳಿಂದ ಮಾಹಿತಿ ಬಂದಿದೆ. ಮೈಸೂರಿನಲ್ಲೂ ಅದೇ ಅನ್‌ಲಾಕ್ ನಿಯಮ ಜಾರಿಯಾಗಲಿದ್ದು, ಮೈಸೂರಿಗರು ಬಲು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕಿದೆ.

ಸದ್ಯ ರಾಜ್ಯ ಸರ್ಕಾರದ ಮಾರ್ಗಸೂಚಿಗೆ ಯಾವುದೇ ತಿದ್ದುಪಡಿ ಇಲ್ಲದೆ, ಸರ್ಕಾರದ ಮಾರ್ಗಸೂಚಿ ಯಥಾವತ್ತಾಗಿ ಮೈಸೂರಿನಲ್ಲಿ ಜಾರಿಗೆ ಬರಲಿದೆ. ಇನ್ನು ವ್ಯಾಪಾರಕ್ಕೆ ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ಅವಕಾಶವಿದ್ದು ದೇಗುಲಗಳು ಸಹ ಓಪನ್ ಆಗಲಿದೆ. ಅಲ್ಲದೆ ರಾಜ್ಯ ಸರ್ಕಾರ ಮಾಡಿರೋ ಎಲ್ಲ ಆದೇಶ ಮೈಸೂರಿಗು ಅನ್ವಯ ಆಗಲಿದೆ. ಇದಕ್ಕಾಗಿ ಹೊಸ ಮಾರ್ಗಸೂಚಿ ಇಲ್ಲ ಎಂದು ಜಿಲ್ಲಾಡಳಿತದ ಮೂಲಗಳಿಂದ ಮಾಹಿತಿ ಬಂದಿದೆ.

ದೇಗುಲ ಓಪನ್-

ನಾಳೆಯಿಂದ ದೇವಾಲಗಳ ಓಪನ್ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ದತೆ ಆಗುತ್ತಿದೆ. ಇಷ್ಟು ದಿನ ಸಾರ್ವಜನಿಕ ದರ್ಶನಕ್ಕೆ ಬಂದ್ ಆಗಿದ್ದ ದೇವಾಲಯದಲ್ಲಿಗಾ ದೇವಾಲಯದ ಹೊರ ಹಾಗೂ ಒಳಾವರಣದಲ್ಲಿ ಸ್ಯಾನಟೈಸ್ ಮಾಡಲಾಗ್ತಿದೆ.

About Author

Leave a Reply

Your email address will not be published. Required fields are marked *