ಕೊರೊನಾಗೆ ಫ್ಯಾಕ್ಟರಿ ನೌಕರರು ಸೆಡ್ಡು: ಮಾಸ್ಕ್ ಹಾಕದೇ ಗುಂಪು ಗುಂಪಾಗಿ ಸಂಚರಿಸುತ್ತಿರುವ ನೌಕರರು
1 min read
ಮೈಸೂರು: ಮೈಸೂರಿನ ಕಡಕೊಳದಲ್ಲಿರುವ ಟಿವಿಎಸ್ ಕಾರ್ಖಾನೆಯ ಕೊರೊನಾಗೆ ಸೆಡ್ಡು ಹೊಡೆದಿದ್ದು, ಮಾಸ್ಕ್ ಹಾಕದೇ ಗುಂಪು ಗುಂಪಾಗಿ ಸಂಚರಿಸುತ್ತಿದ್ದಾರೆ.
ಕಡ್ಡಾಯ ಮಾಸ್ಕ್ ಬಳಸಬೇಕೆಂಬ ನಿಯಮವಿದ್ರೂ ಟಿವಿಎಸ್ ಕಂಪನಿ ನೌಕರರು ಮಾಸ್ಕ್ ಬಳಸದೆ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ಕಾರ್ಖಾನೆ ಆವರಣದಲ್ಲಿ ಸಾಮಾಜಿಕ ಅಂತರವೇ ಮಾಯವಾಗಿದೆ.

ಕಾರ್ಖಾನೆ ಆಡಳಿತ ಮಂಡಳಿ ದಿವ್ಯ ನಿರ್ಲಕ್ಷ್ಯ ವಹಿಸಿದಿಯ ಎಂಬ ಅನುಮಾನ ಮೂಡುತ್ತಿದೆ. ಇನ್ನು ಜಿಲ್ಲಾಡಳಿತ ಇತ್ತ ಗಮನಹರಿಸಬೇಕೆಂದು ಸ್ಥಳೀಯರು ಒತ್ತಾಯ ಮಾಡಿದ್ದಾರೆ.