ರಂಗಭೂಮಿ ಕಲಾವಿದನನ್ನ ಬಲಿಪಡೆದ ಕೊವಿಡ್
1 min readಮೈಸೂರು: ಮೈಸೂರಿನ ರಂಗಭೂಮಿ ಯುವ ಕಲಾವಿದ ವಿಕ್ರಮ್ (37) ಕೋವಿಡ್ ಗೆ ಬಲಿಯಾಗಿದ್ದಾರೆ. ಮಲೆಗಳಲ್ಲಿ ಮದುಮಗಳು ಹಾಗೂ ಇತರ ನಾಟಕಗಳಲ್ಲಿ ವಿಕ್ರಮ್ ಅಭಿನಯಿಸಿದ್ದರು.
ನಾಟಕ ನಿರ್ದೇಶನ ಮಾಡುತ್ತಿದ್ದ ಬನ್ನೂರಿನ ವಿಕ್ರಮ್ ಮಜಾ ಭಾರತ ಟಿವಿ ಕಾರ್ಯಕ್ರಮಗಳಲ್ಲಿ ಮೆಂಟರ್ ಆಗಿ ಕೆಲಸ ಮಾಡಿದ್ದರು. ಇನ್ನು ಇವರ ತಂದೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೆಲವರ್ಷಗಳ ಹಿಂದೆ ವಿಕ್ರಮ್ ತನ್ನ ಸಹೋದರನನ್ನು ಕಳೆದುಕೊಂಡಿದ್ದ. ಇದ್ದ ಇಬ್ಬರು ಮಕ್ಕಳನ್ನು ಕಳೆದುಕೊಂಡ ತಾಯಿಗೆ ದಿಕ್ಕು ತೋಚದಂತಾಗಿದ್ದಾರೆ. ಸೋಂಕು ತಗುಲಿ ನಾಲ್ಕು ದಿನವಾಗಿದ್ದರು ಹೆಚ್ಚಾಗಿ ಗಮನ ಹರಿಸದೆ ಕಲಾವಿದ ಸಾವು ತಂದುಕೊಂಡಿದ್ದಾನೆ. ಕೋವಿಡ್ ನಿಂದಾಗಿ ಕಲಾವಿದನ ಕುಟುಂಬ ನಲುಗಿಹೋಗಿದೆ.
ಇಂದು ಉಸಿರಾಟ ಸಮಸ್ಯೆ ಎಂದು ಕ್ಲಿನಿಕ್ ಹೋದ ಕೆಲವೇ ಗಂಟೆಯಲ್ಲಿ ವಿಕ್ರಮ್ ಸಾವನ್ನಪ್ಪಿದ್ದಾರೆ.