ಮೈಸೂರಿನಲ್ಲಿ ಲಾಕ್ಡೌನ್ ಮತ್ತಷ್ಟು ಸಡಿಲಿಕೆ: ಪ್ರತಿದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
1 min readಮೈಸೂರು: ಮೈಸೂರಿನಲ್ಲಿ ಲಾಕ್ಡೌನ್ ಮತ್ತಷ್ಟು ಸಡಿಲಿಕೆ ಮಾಡಲಾಗಿದೆ. ವರ್ಗಾವಣೆಗೂ ಮುನ್ನ ಡಿಸಿ ರೋಹಿಣಿ ಸಿಂಧೂರಿ ಹೊರಡಿಸಿದ್ದ ಆದೇಶವನ್ನ ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಬದಲಾಯಿಸಿದ್ದಾರೆ. ದಿನಾಂಕ 5-6-2021ರಂದು ಹೊರಡಿಸಿದ್ದ ಆದೇಶವನ್ನ ಮಾರ್ಪಡಿಸಲಾಗಿದೆ.
ಇವತ್ತಿನ ಆದೇಶದ ಪ್ರಕಾರ ಹಳೇ ಆದೇಶ ಹಿಂಪಡೆದು ಪ್ರತಿದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ದಿನಾಂಕ ಜೂ.7 ರಿಂದ 14-6-2021ರ ವರೆಗೆ ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಬೆಳಗ್ಗೆ 10 ಗಂಟೆ ವರೆಗೆ ಸರ್ಕಾರದ ಮಾರ್ಗಸೂಚಿಯಲ್ಲಿ ವಿನಾಯಿತಿ ನೀಡುವ ಚಟುವಟಿಕೆಗಳಿಗೆ ಎಲ್ಲಾ ದಿನ ಅವಕಾಶ ಇರುತ್ತದೆ ಎಂದು ಹೊಸ ಆದೇಶ ಮಾರ್ಪಡಿಸಿ ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಆದೇಶ ಹೊರಡಿಸಿದ್ದಾರೆ.