ಚಾಮುಂಡಿಬೆಟ್ಟದ ಪ್ರಾಣಿ ಪಕ್ಷಿಗಳ ಹಸಿವು ನೀಗಿಸುತ್ತಿದ್ದಾರೆ ಮೈಸೂರಿನ ಸಬ್ ಇನ್ಸಪೆಕ್ಟರ್
1 min readಮೈಸೂರು: ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿದೆ.
ಲಾಕ್ ಡೌನ್ ನಿಂದಾಗಿ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಇದರಿಂದ ಚಾಮುಂಡಿಬೆಟ್ಟಕ್ಕೆ ಭಕ್ತರ –ಪ್ರವಾಸಿಗರ ಓಡಾಟವೂ ಇಲ್ಲದಂತಾಗಿದೆ. ಅದರಿಂದ ಅಲ್ಲಿಯೇ ವಾಸಿಸುತ್ತಿರುವ ಹಲವು ಪ್ರಾಣಿ ಪಕ್ಷಿಗಳು ಪ್ರವಾಸಿಗರು, ಭಕ್ತರು ನೀಡುವ ಆಹಾರ ಸಿಗದೆ ಹಸಿವಿನಿಂದ ಬಳಲುವಂತಾಗಿದೆ. ಇದನ್ನು ಮನಗಂಡ ಕೆ.ಆರ್. ಠಾಣೆಯ ಸಬ್ ಇನ್ಸಪೆಕ್ಟರ್ ಸುನಿಲ್ ತಮ್ಮ ಕರ್ತವ್ಯದ ಜೊತೆ ಚಾಮುಂಡಿಬೆಟ್ಟದಲ್ಲಿರುವ ಮಂಗಗಳು ಮತ್ತು ಪಕ್ಷಿಗಳಿಗೆ ಹಣ್ಣು, ಕಾಳುಕಡಿಯನ್ನು ನೀಡಿ ಹಸಿವನ್ನು ನೀಗಿಸುತ್ತಿದ್ದಾರೆ.
ತಮ್ಮ ಒತ್ತಡದ ಕೆಲಸದ ನಡುವೆಯೂ ಬೆಳಿಗ್ಗೆ ಮತ್ತು ಸಾಯಂಕಾಲ ಬೆಟ್ಟಕ್ಕೆ ತೆರಳಿ ಪ್ರಾಣಿಪಕ್ಷಿಗಳ ಹಸಿವನ್ನು ನೀಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.